ಟ್ರೆಂಡಿ ಲುಕ್ ನೀಡುವ ಲಿಕ್ವಿಡ್ ಲಿಪ್‌ಸ್ಟಿಕ್ ಶೇಡ್‌ಗಳಿವು
By Reshma
Jun 25, 2024
Hindustan Times
Kannada
ಲಿಪ್‌ಸ್ಟಿಕ್ ಬಣ್ಣಗಳು ತುಟಿಯ ರಂಗು ಹೆಚ್ಚಿಸಿ ಅಂದ ಹೆಚ್ಚುವಂತೆ ಮಾಡುತ್ತವೆ. ಇವು ಗ್ಲಾಮರಸ್ ನೋಟ ಸಿಗುವಂತೆ ಮಾಡುವುದು ಸುಳ್ಳಲ್ಲ.
ಹೊಸ ಹೊಸ ಟ್ರೆಂಡ್, ಛಾಯೆಯ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಬರುವ ಮೂಲಕ ಹೆಂಗೆಳೆಯರ ಅಂದ ಹೆಚ್ಚಲು ಸಹಾಯ ಮಾಡುತ್ತವೆ.
ಲಿಕ್ವಿಡ್ ಲಿಪ್‌ಸ್ಟಿಕ್ ಇತ್ತೀಚಿನ ಟ್ರೆಂಡ್ ಆಗಿದೆ. ಇದರಲ್ಲಿನ ಹೊಸ ಛಾಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ಪೀಚ್ ಕಲರ್ ಲಿಪ್‌ಸ್ಟಿಕ್ ಟ್ರೆಂಡ್ ಹೆಚ್ಚು ಸದ್ದು ಮಾಡುತ್ತಿದೆ. ಈ ಲಿಪ್‌ಸ್ಟಿಕ್ ಕಲರ್ ನಿಮಗೆ ಗ್ಲಾಮ್ ಲುಕ್ ನೀಡುತ್ತದೆ.
ನೈಟ್ ಪಾರ್ಟಿ, ಫಂಕ್ಷನ್‌ಗೆ ಹೋಗುವಾಗ ವೈನ್ ಲಿಪ್‌ಸ್ಟಿಕ್ ಶೇಡ್ ಸೂಕ್ತವಾಗಿರುತ್ತದೆ. ಇದು ನಿಮಗೆ ಬೋಲ್ಡ್ ಲುಕ್ ನೀಡುತ್ತದೆ.
ವಿಶೇಷ ಸಂದರ್ಭಗಳಲ್ಲಿ ನೀವು ಕಂದು ಬಣ್ಣದ ಲಿಪ್‌ಸ್ಟಿಕ್ ಧರಿಸಬಹುದು. ಇದರಲ್ಲಿ ನ್ಯೂಡ್ ಛಾಯೆ ಕೂಡ ಸಿಗುತ್ತದೆ.
ಬೋಲ್ಡ್ ರೆಡ್ ಲಿಪ್‌ಸ್ಟಿಕ್ ಎಲ್ಲಾ ರೀತಿಯ ಲುಕ್‌ಗೂ ಮ್ಯಾಚಿಂಗ್ ಎನ್ನಿಸುತ್ತದೆ. ಇವು ಪಾರ್ಟಿಗೆ ಹೇಳಿ ಮಾಡಿಸಿದ್ದು.
ತಿಳಿ ಕಿತ್ತಳೆ ಬಣ್ಣದ ಲಿಪ್‌ಸ್ಟಿಕ್ ಶೇಡ್ ಹೊಸದು. ಮ್ಯಾಚಿಂಗ್ ಔಟ್‌ಫಿಟ್ ಅಥವಾ ವೆರ್ಸ್ಟನ್ ಲುಕ್‌ಗೆ ಇದು ಹೇಳಿ ಮಾಡಿಸಿದ್ದು.
ಸೀರೆ ಧರಿಸಿದರೆ ಕಡು ಮೆರೂನ್ ಬಣ್ಣದ ಲಿಕ್ವಿಡ್ ಲಿಪ್‌ಸ್ಟಿಕ್ ಹಚ್ಚಿ. ಇದು ಯಾವಾಗಲೂ ಟ್ರೆಂಡಿ ಆಗಿದೆ.
ನ್ಯಾಚುರಲ್ ರೋಸ್ ಕಲರ್ ಲಿಪ್‌ಸ್ಟಿಕ್ ಕೂಡ ಲಿಕ್ವಿಡ್ ರೂಪದಲ್ಲಿ ಬರಲು ಆರಂಭಿಸಿದೆ. ನೀವು ಸರಳ ಮೇಕಪ್ ಮಾಡಿಕೊಳ್ಳುತ್ತಿದ್ದರೆ ಇದು ನಿಮಗೆ ಹೊಂದಿಕೆ ಆಗುತ್ತದೆ.
ಗರ್ಭಿಣಿಯರು ಸೇವಿಸಲೇಬೇಕಾದ 5 ಹಣ್ಣುಗಳಿವು
Image Credits: Adobe Stock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ