ಕರಿಮಣಿ ಮಾಲೀಕನಿಗೂ ಇಷ್ಟವಾಗೋ ಡೈಲಿವೇರ್‌ ಮಂಗಳಸೂತ್ರಗಳ ಡಿಸೈನ್ ಇವು

By Reshma
Apr 24, 2024

Hindustan Times
Kannada

ಭಾರತೀಯ ಹೆಣ್ಣುಮಕ್ಕಳಿಗೆ ಮಂಗಳಸೂತ್ರ ಬಹಳ ಮಹತ್ವದ್ದು. ಹಿಂದೆಲ್ಲಾ ಎರಡೆಳೆಯ ಉದ್ದದ ಮಂಗಳಸೂತ್ರ ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈಗೆಲ್ಲಾ ಫ್ಯಾನ್ಸಿ ಕರಿಮಣಿಯದ್ದೇ ಸದ್ದು. 

ಕಚೇರಿಗೆ, ಔಟಿಂಗ್‌ಗೂ ಹೊಂದಿಕೆಯಾಗುವ ಮಂಗಳಸೂತ್ರ ಡಿಸೈನ್‌ ನೀವು ನೋಡುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದಿಷ್ಟು ಹೊಸ ಹೊಸ ಡಿಸೈನ್‌ನ ಮಂಗಳಸೂತ್ರಗಳು. 

ಸಿಂಗಲ್‌ಸ್ಟೋನ್‌ ಪೆಂಡೆಂಟ್‌ ಇರುವ ಮಂಗಳಸೂತ್ರಗಳು ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿವೆ. ಇದಕ್ಕೆ ಕರಿಮಣಿ ಹಾಗೂ ಚಿನ್ನದ ಮಣಿಯ ಸರ ಜೊತೆ ಮಾಡಿಕೊಳ್ಳಬಹುದು. 

ಹಾರ್ಟ್‌ಶೇಪ್‌ ಪೆಂಡೆಂಟ್‌ ಇರುವ ಮಂಗಳಸೂತ್ರ ನಿಮಗೆ ಹೆಚ್ಚು ಹೊಂದಿಕೆಯಾಗಬಹುದು. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡಿ ಕೂಡ ಸುಳ್ಳಲ್ಲ. 

ಇನ್ಫಿನಿಟಿ ಚಿಹ್ನೆಯ ಮಂಗಳಸೂತ್ರದ ಪೆಂಡೆಂಟ್‌ ಬಿ ಟೌನ್‌ ಬೆಡಗಿಯರ ಅಂದ ಹೆಚ್ಚಿಸಿರುವುದು ಸುಳ್ಳಲ್ಲ. 

ಡಬಲ್‌ ಸ್ಟೋನ್‌ ವಿನ್ಯಾಸದ ಮಂಗಳಸೂತ್ರ ಸಾಕಷ್ಟು ಜನಪ್ರಿಯವಾಗಿದೆ. ಕಪ್ಪು ದೊಡ್ಡ ಮಣಿಗಳ ಕರಿಮಣಿ ಜೊತೆ ಇದು ಹೆಚ್ಚು ಹೊಂದುತ್ತದೆ. 

ಡೈಮಂಟ್‌ ಹಾಗೂ ಮುತ್ತಿನ ಜೋಡಣೆ ಇರುವ ಪೆಂಡೆಂಟ್‌ ಕೂಡ ಸದ್ಯ ಟ್ರೆಂಡ್‌. ಇದು ನಿಮಗೆ ಸ್ಟೈಲಿಶ್‌ ನೋಟ ನೀಡುತ್ತದೆ. 

ಸಿಂಗಲ್‌ ಎಳೆಯ ಕರಿಮಣಿಯೊಂದಿಗೆ ಹೂವಿನ ಚಿತ್ತಾರದ ಪೆಂಡೆಂಟ್‌ ಇರುವ ಮಂಗಳಸೂತ್ರ ಸಖತ್‌ ಟ್ರೆಂಡಿ ಆಗಿರುವುದು ಸುಳ್ಳಲ್ಲ. 

ಚಿನ್ನ ಹಾಗೂ ವಜ್ರದ ಸಂಯೋಜನೆಯ ಪೆಂಡೆಂಟ್‌ ಮಂಗಳಸೂತ್ರಕ್ಕೆ ಹೆಚ್ಚು ಹೊಂದುತ್ತದೆ. ಫಂಕ್ಷನ್‌ಗಳಿಗೆ ಧರಿಸಲು ಇದು ಹೆಚ್ಚು ಹೊಂದುತ್ತದೆ. 

ಅರ್ಧ ಚಂದ್ರ ಅಥವಾ ಅರ್ಧ ಹೂವಿನ ಆಕಾರದ ಪೆಂಡೆಂಟ್‌ ಡೈಲಿವೇರ್‌ಗೆ ಹೇಳಿ ಮಾಡಿಸಿದಂತಿರುವುದು ಸುಳ್ಳಲ್ಲ. 

ಹೀರೋ ಕ್ಸೂಮ್ 125 ಭಾರತದ ಅತಿ ವೇಗದ ಸ್ಕೂಟರ್ ಇದು