ಸೀರೆ, ಲೆಹೆಂಗಾದ ಅಂದ ಹೆಚ್ಚಿಸುವ ಹೈ ಹೀಲ್ಸ್ ಚಪ್ಪಲಿಗಳಿವು
By Reshma
Jul 31, 2024
Hindustan Times
Kannada
ಸೀರೆ ಇರಲಿ, ಲೆಹೆಂಗಾ ಇರಲಿ ಹೈ ಹೀಲ್ಸ್ ಎಲ್ಲರಿಗೂ ಚೆನ್ನಾಗಿ ಕಾಣುತ್ತದೆ. ಇದು ನಮ್ಮ ಲುಕ್ ಅನ್ನೇ ಬದಲಿಸುವುದು ಮಾತ್ರವಲ್ಲ, ಎತ್ತರ ಕಾಣುವಂತೆಯೂ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರೆಗೆ ಹೈ ಹೀಲ್ಸ್ ಧರಿಸುವುದು ಸಹಜ. ಇದು ಫೂಟ್‌ವೇರ್ ಫ್ಯಾಷನ್‌ನ ಟ್ರೆಂಡ್ ಕೂಡ ಹೌದು.
ಚೈನ್ ರೂಪದ ಹೀಲ್ಸ್ ಹಿಂಭಾಗದಲ್ಲಿ ಕಟ್ಟುವ ಸರಪಳಿಯನ್ನು ಹೊಂದಿರುತ್ತದೆ. ಈ ರೀತಿ ಹೀಲ್ಸ್ ಇತ್ತೀಚೆಗೆ ಫ್ಯಾಷನ್ ಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಗೋಲ್ಡನ್ ಕಲರ್ ಬ್ಲಾಕ್‌ಹೀಲ್ಸ್ ಲೆಹೆಂಗಾ ಲುಕ್‌ನಲ್ಲಿ ಪರ್ಫೆಕ್ಟ್ ಆಗಿ ಕಾಣುತ್ತದೆ. ಇದು ಧರಿಸಲು ಕೂಡ ಆರಾಮ ಎನ್ನಿಸುತ್ತದೆ.
ಓಪನ್ ಪೂಟ್ ಹೀಲ್ಸ್ ಧರಿಸಲು ಸುಲಭ. ಇದು ಸೀರೆಯ ಲುಕ್‌ಗೆ ಹೆಚ್ಚು ಹೊಂದಿಕೆಯಾಗುತ್ತದೆ.
ಪಿಂಕ್ ಬಣ್ಣದ ಮೇಲೆ ಹರಳು ಕೂರಿಸಿರುವ ಸ್ಟೋನ್ ಸ್ಟೈಲ್ ಹೀಲ್ಸ್ ಕ್ಲಾಸಿ ಲುಕ್ ನೀಡುತ್ತದೆ. ಈ ರೀತಿಯ ಸೀರೆ ಫ್ಯಾನ್ಸಿ ಸೀರೆಯಲ್ಲಿ ಚೆನ್ನಾಗಿ ಕಾಣುತ್ತದೆ.
ಬೀಜ್ ಹೀಲ್ಸ್ ಇತ್ತೀಚೆಗೆ ಹೆಚ್ಚು ಟ್ರೆಂಡ್‌ನಲ್ಲಿದೆ. ಇದು ಲೆಹೆಂಗಾ ಅಥವಾ ಸೀರೆಯ ಮೇಲೆ ಕ್ಲಾಸಿ ಲುಕ್ ನೀಡುತ್ತದೆ.
ಕಪ್ಪು ಬಣ್ಣದ, ಡಿಸೈನ್ ಹೊಂದಿರುವ ಬ್ಲಾಕ್ ಹೀಲ್ಸ್ ಯಾವುದೇ ಉಡುಪಿಗೆ ಪರಿಪೂರ್ಣ ಲುಕ್ ನೀಡುತ್ತದೆ. ಲೆಹೆಂಗಾ ಸೀರೆ ಜೊತೆ ಇದು ಮಸ್ತ್ ಆಗಿ ಕಾಣಿಸುತ್ತದೆ.
ಮುತ್ತಿನ ವಿನ್ಯಾಸವಿರುವ ಹೀಲ್ಸ್ ಸೀರೆ ಅಥವಾ ಲೆಹೆಂಗಾದ ಜೊತೆ ಚೆನ್ನಾಗಿ ಕಾಣುತ್ತದೆ. ಇದು ಕೂಡ ಇತ್ತೀಚಿನ ಟ್ರೆಂಡ್ ಅನ್ನೋದು ಸುಳ್ಳಲ್ಲ.
ಸೀರೆ ಅಥವಾ ಲೆಹೆಂಗಾದೊಂದಿಗೆ ಬೆಲ್ಲಿ ಸ್ಟೈಲ್‌ನ ಹೈ ಹೀಲ್ಸ್ ಧರಿಸಿ. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ.
ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ