ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಸೀರೆಗಳಿವು, ಇದರಲ್ಲಿ ನಿಮಗ್ಯಾವುದಿಷ್ಟ?
By Reshma Oct 08, 2024
Hindustan Times Kannada
ಲೆಹರಿಯಾ ಸೀರೆ, ಇದು ರಾಜಸ್ಥಾನ ಮೂಲದ್ದು. ಇದನ್ನು ಟೈ ಅಂಡ್ ಡೈ ವಿಧಾನವನ್ನ ಬಳಸಿ ತಯಾರಿಸಲಾಗುತ್ತದೆ
ಬಾಂದಾನಿ, ಬಹುತೇಕ ಮಹಿಳೆಯರ ನೆಚ್ಚಿನ ಸೀರೆ. ಅದನ್ನು ಗುಜರಾತ್‌ನಲ್ಲಿ ತಯಾರಿಸಲಾಗುತ್ತದೆ. ಹಬ್ಬ ಮದುವೆಯಂತಹ ಸೀಸನ್‌ಗೆ ಇದು ಹೇಳಿ ಮಾಡಿಸಿದ್ದು
ಬನಾರಸಿ ಸೀರೆ, ಉತ್ತರ ಪ್ರದೇಶ ಮೂಲದ ಈ ಸೀರೆ ಚಿನ್ನ ಹಾಗೂ ಬೆಳ್ಳಿ ಕಸೂತಿಗೆ ಹೆಸರುವಾಸಿಯಾಗಿದೆ
ಕಾಂಜೀವರಂ ಸೀರೆ ಹೆಸರು ಕೇಳಿದಾಕ್ಷಣ ಇದು ತಮಿಳುನಾಡಿನ ಮೂಲದ್ದು ಎಂಬುದು ನಿಮಗೆ ಅರಿವಾಗುತ್ತದೆ. ಭಾರತದಲ್ಲಿನ ಅತ್ಯಂತ ಸುಂದರ ಪ್ರಾದೇಶಿಕ ಸೀರೆ ಇದು ಎಂಬ ಖ್ಯಾತಿ ಕಾಂಜೀವರಂ ಸೀರೆಗಿದೆ
ಚಿಕಂಕರಿ ಸೀರೆಗಳು ಉತ್ತರ ಪ್ರದೇಶದ ಲಕ್ನೋ ಮೂಲದ್ದು. ವಿಭಿನ್ನ ಕಸೂತಿ ಕೆಲಸಗಳಿಗೆ ಇದು ಹೆಸರುವಾಸಿಯಾಗಿದೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು