ಬೇಸಿಗೆಯಲ್ಲಿ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಅಗತ್ಯ ಉಡುಪುಗಳಿವು
By Reshma Apr 21, 2024
Hindustan Times Kannada
ಬೇಸಿಗೆಗೆ ಮಿಡ್ಡಿ ಅಥವಾ ಮಿನಿ ಸ್ಕರ್ಟ್ ಹೇಳಿ ಮಾಡಿಸಿದ್ದು. ಹತ್ತಿ ಅಥವಾ ಲೆನಿನ್ ಬಟ್ಟೆಯ ಸ್ಕರ್ಟ್ ಕೂಡ ಬಹುಮುಖಿ ಉಡುಪು. ಇದರೊಂದಿಗೆ ಟ್ರೆಂಡಿ ಟಾಪ್ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.
ಡೆನಿಮ್, ಲೆನಿನ್ ಅಥವಾ ಕಾಟನ್ ಶಾರ್ಟ್ಸ್ ಬೇಸಿಗೆಗೆ ಹೇಳಿ ಮಾಡಿಸಿದ್ದು. ಸ್ನೇಹಿತರು ಅಥವಾ ಕುಟುಂಬದವರ ಜೊತೆಗೆ ಹೊರಗಡೆ ಹೋಗುವಾಗ ಇದು ಬೆಸ್ಟ್, ಬೀಚ್ ಪ್ಲಾನ್ ಇದ್ರೆ ಖಂಡಿತ ಸ್ಯೂಟ್ ಆಗುತ್ತೆ.
ಕ್ರಾಪ್ಡ್ ಪ್ಯಾಂಟ್‌ಗಳು ಮತ್ತು ಗಾಳಿಯಾಡುವ ಅಗಲವಾದ ಪ್ಯಾಂಟ್‌ಗಳು ಬೇಸಿಗೆಗೆ ಹೇಳಿ ಮಾಡಿಸಿದವು. ಅವುಗಳ ಮೇಲೆ ಅಂದದ ಕುರ್ತಾ, ಫ್ಲ್ಯಾಟ್ ಚಪ್ಪಲಿ ಧರಿಸುವುದು ಉತ್ತಮ.
ಟ್ಯಾಂಕ್ ಟಾಪ್: ಬೇಸಿಗೆಯಲ್ಲಿ ವಿವಿಧ ಬಣ್ಣ ಹಾಗೂ ಡಿಸೈನ್ ಇರುವ ಟ್ಯಾಂಕ್ ಟಾಪ್‌ಗಳನ್ನು ನಿಮ್ಮ ವಾರ್ಡ್‌ರೋಬ್‌ನಲ್ಲಿ ಇರಿಸಿ. ಇದನ್ನು ಸ್ಕರ್ಟ್, ಜೀನ್ ಜೊತೆ ಧರಿಸಿದರೆ ಸಖತ್ ಆಗಿರುತ್ತೆ.
ಟೀ ಶರ್ಟ್ಸ್: ಬೇಸಿಗೆಗೆ ಟೀ ಶರ್ಟ್‌ಗಳು ಹೇಳಿ ಮಾಡಿಸಿದವು. ಹತ್ತಿ ಬಟ್ಟೆಯ ತೆಳುವಾದ ಗಾಳಿಯಾಡುವಂತಿರುವ ಟೀ ಶರ್ಟ್‌ಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.
ಸಿಯಾನ್, ರೆಯಾನ್ ಬಟ್ಟೆಯ ಹೂವಿನ ಚಿತ್ತಾರದ ಬ್ಲೌಸ್‌ಗಳು ಬೇಸಿಗೆಯಲ್ಲಿ ಅಂದ ಹೆಚ್ಚುವ ಜೊತೆಗೆ ಟ್ರೆಂಡಿ ಆಗಿಯೂ ಕಾಣಿಸುತ್ತವೆ. ಇದು ಬಿಸಿಲ ಬೇಗೆ ನೀಗಲು ಸಹಕಾರಿ.
ಸಂಡ್ರೆಸ್: ಹೂವಿನ ಚಿತ್ತಾರದ ಕ್ಯಾಶುವಲ್ ಸಂಡ್ರೆಸ್‌ಗಳು ನಿಮ್ಮ ಅಂದಕ್ಕೆ ಹೊಸ ಅರ್ಥ ನೀಡುವುದರಲ್ಲಿ ಎರಡು ಮಾತಿಲ್ಲ. ಇದು ಸಿಂಗಲ್ ಟಾಪ್ ಆಗಿರುವ ಕಾರಣ ಬೇಸಿಗೆಗೆ ಹೇಳಿ ಮಾಡಿಸಿದ್ದು.
ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು