ಕರ್ಲಿ ಹೇರ್‌ಗೆ ಒಪ್ಪುವ ಬ್ಯೂಟಿಫುಲ್ ಹೇರ್‌ಸ್ಟೈಲ್‌ಗಳಿವು

By Reshma
Jul 03, 2024

Hindustan Times
Kannada

ಗುಂಗುರು ಕೂದಲು ಅಥವಾ ಕರ್ಲಿ ಹೇರ್‌ ಇದ್ದರೆ ಕೂದಲಿಗೆ ವಿನ್ಯಾಸ ಮಾಡುವುದು ನಿಜಕ್ಕೂ ಕಷ್ಟ. ಇದರಿಂದ ಅಂದಗೆಡುವುದು ಸಾಮಾನ್ಯ.

ನಿಮ್ಮದು ಕರ್ಲಿ ಹೇರ್‌ ಆಗಿದ್ದರೆ, ನೀವು ಸುಲಭವಾಗಿ ಸುಂದರ ಕೇಶವಿನ್ಯಾಸ ಮಾಡಿಕೊಳ್ಳಬಹುದು. ಕರ್ಲಿ ಹೇರ್‌ಗೆ ಹೊಂದುವ ಕೇಶ ವಿನ್ಯಾಸಗಳು ಇಲ್ಲಿವೆ ನೋಡಿ.

ಕರ್ಲಿ ಕೂದಲಿಗೆ ಸರಳವಾದ ಕೇಶವಿನ್ಯಾಸವೆಂದರೆ ಪೋನಿಟೇಲ್‌. ಇಂಡಿಯನ್‌, ವೆಸ್ಟರ್ನ್‌ ಯಾವುದೇ ಫ್ಯಾಷನ್‌ಗೂ ಇದು ಹೊಂದುತ್ತೆ.

ಲೋ ಬನ್‌: ಕರ್ಲಿ ಕೂದಲಿಗೆ ಬನ್‌ ವಿನ್ಯಾಸ ಚೆನ್ನಾಗಿ ಕಾಣುತ್ತದೆ. ಪಾಶ್ಚಾತ್ಯ ಉಡುಪು ಧರಿಸಿದಾಗ ಬನ್‌ ಹೇರ್‌ ವಿನ್ಯಾಸ ಮಾಡಿ. ಇದು ಕೂದಲಿನ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ನಟಿ ಸನ್ಯಾ ಮಲ್ಹೋತ್ರಾ ಕಪ್ಪು ಬಣ್ಣದ ಮಾರ್ಡನ್‌ ಡ್ರೆಸ್‌ ಜೊತೆ ಬನ್‌ ಹೇರ್‌ಸ್ಟೈಲ್‌ ಮಾಡಿದ್ದು, ಇದು ಅವರಿಗೆ ಡಿಫ್ರೆಂಟ್‌ ಲುಕ್‌ ಸಿಗುವಂತೆ ಮಾಡಿದೆ.

ಭಾರತೀಯ ಸಾಂಪ್ರದಾಯಿಕ ಉಡುಗೆಯ ಜೊತೆ ಪೋನಿಟೇಲ್‌ ಧರಿಸಿ, ಆಭರಣಗಳನ್ನ ತೊಟ್ಟರೆ ನಿಮ್ಮ ಅಂದ ದ್ವಿಗುಣಗೊಳ್ಳುವುದರಲ್ಲಿ ಅನುಮಾನವಿಲ್ಲ.

ಬನ್‌ ಅಥವಾ ಓಪನ್‌ ಹೇರ್‌ ಲುಕ್‌ ಇರುವ ಹೇರ್‌ಬ್ಯಾಂಡ್‌ ಕೂಡ ಗುಂಗುರು ಕೂದಲಿನ ಮೇಲೆ ಚೆನ್ನಾಗಿ ಕಾಣುತ್ತದೆ.

ಕರ್ಲಿ ಹೇರ್‌ ಉದ್ದವಾಗಿದ್ದರೆ ಸುಂದರವಾಗಿ ಜಡೆ ಹೆಣೆದು ಅದಕ್ಕೆ ಅಲಂಕಾರಿಕ ವಸ್ತುಗಳನ್ನು ಸಿಂಗರಿಸಬಹುದು.

ಹಿಂದಿ ನಟಿ ಮಿಥಿಲಾ ತಮ್ಮ ಕೂದಲನ್ನು ಸರಳವಾದ ಬನ್‌ ಆಕಾರದಲ್ಲಿ ವಿನ್ಯಾಸಗೊಳಿಸಿ ಅದಕ್ಕೆ ಹೂಗಳಿಂದ ಸುತ್ತಿದ್ದಾರೆ. ಇದನ್ನು ನೀವು ಪ್ರಯತ್ನಿಸಬಹುದು.

ಸಡಿಲವಾದ ಬನ್‌ ಕೂಡ ಕರ್ಲಿ ಹೇರ್‌ಗೆ ಹೆಚ್ಚು ಹೊಂದುತ್ತದೆ. ಆಗ ನೀವು ಸುತ್ತಲಿನ ಕೂದಲನ್ನು ಹರಡಿ ಬಿಡಬೇಕು.

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)