ಕಾಲುಂಗುರದಲ್ಲೂ ಬಂದಿದೆ ಬಗೆಬಗೆ ವಿನ್ಯಾಸ, ಇತ್ತೀಚಿನ ಟ್ರೆಂಡ್ ಗಮನಿಸಿ

By Reshma
Sep 07, 2024

Hindustan Times
Kannada

ಮುತ್ತೈದೆಯರು ಧರಿಸುವ 5 ಮುತ್ತುಗಳಲ್ಲಿ ಕಾಲುಂಗರ ಕೂಡ ಒಂದು. ಸಂಪ್ರದಾಯದೊಂದಿಗೆ ಫ್ಯಾಷನ್ ಕೂಡ ಇದರೊಂದಿಗೆ ತಳುಕು ಹಾಕಿಕೊಂಡಿದೆ 

ಇತ್ತೀಚಿನ ದಿನಗಳಲ್ಲಿ ಕಾಲುಂಗರದಲ್ಲೂ ವಿವಿಧ ರೀತಿಯ ವಿನ್ಯಾಸಗಳು ಬಂದಿವೆ. ಮಾತ್ರವಲ್ಲ ಈ ಹೊಸ ಡಿಸೈನ್‌ಗಳು ಟ್ರೆಂಡ್ ಸೃಷ್ಟಿಸಿರುವುದು ಸುಳ್ಳಲ್ಲ 

ಗೆಜ್ಜೆ ಜೋಡಿಸಿರುವ ಕಾಲುಂಗರದ ನಡುವೆ ಹಕ್ಕಿ ಚಿತ್ತಾರವಿರುವ ಈ ಕಾಲುಂಗುರ ನಿಮ್ಮ ಬೆರಳಿನ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ

ಒಂದು ಸುತ್ತಿನ ರಿಂಗ್ ಮೇಲೆ ಅಗಲವಾದ ಪೆಂಡೆಂಟ್ ರೂಪದ ಕಾಲುಂಗುರ ಕೂಡ ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದಾಗಿದೆ 

ಕಾಲುಂಗುರ ಹಾಗೂ ಕಾಲ್ಗೆಜ್ಜೆಯನ್ನು ಜೋಡಿಸುವ ಚೈನ್ ವಿನ್ಯಾಸದ  ಕಾಲುಂಗುರ ಕೂಡ ಸದ್ಯದ ಟ್ರೆಂಡ್‌. ಫಂಕ್ಷನ್ ಇರುವಾಗ ಧರಿಸಲು ಇದು ಬೆಸ್ಟ್‌ 

ಗೆಜ್ಜೆಯ ಜೊತೆ ಮೀನು ಜೋಡಿಸಿರುವ ಕಾಲುಂಗುರ ಕೂಡ ಸದ್ಯದ ಫ್ಯಾಷನ್ ಟ್ರೆಂಡ್‌, ಇದು ಸರಳವಾಗಿ ಸುಂದರವಾಗಿ ಕಾಣಿಸುತ್ತದೆ

ಚಂದ್ರ, ನಕ್ಷತ್ರ ಗೆಜ್ಜೆಗಳಿರುವ ಕಾಲುಂಗುರ ಕೂಡ ಸಖತ್ ಟ್ರೆಂಡಿ ಎನ್ನಿಸುತ್ತದೆ  

ಹೆಬ್ಬೆರಳಿಗೆ ನೀವು ಕಾಲುಂಗರ ಧರಿಸುವವರಾದರೆ ಸುತ್ತಿನ ಬೆಳ್ಳಿಯ ರಿಂಗ್ ಕೂಡ ಧರಿಸಬಹುದು 

ಕಾಲುಂಗರದಲ್ಲಿ ಈ ಬಳ್ಳಿ ವಿನ್ಯಾಸವು ಸಿಂಪಲ್ ಹಾಗೂ ಟ್ರೆಂಡಿ ಲುಕ್ ನೀಡುವುದರಲ್ಲಿ ಅನುಮಾನವಿಲ್ಲ

ಕಾಲುಂಗುರದಲ್ಲಿ ಝಂಝರ್ ಶೈಲಿಯು ಲೇಟೆಸ್ಟ್ ಟ್ರೆಂಡ್ ಆಗಿದೆ. ಇದು ನಿಮ್ಮ ಕಾಲ್ಬೆರಳುಗಳಿಗೆ ಹೊಸ ಲುಕ್ ನೀಡುವುದು ಸುಳ್ಳಲ್ಲ 

ಕಲರ್‌ಫುಲ್‌ ಚಿಟ್ಟೆಯಾದ ನಿರೂಪಕಿ ಅನುಪಮಾ ಗೌಡ