ಫಂಕ್ಷನ್‌ಗೆ ರೆಡಿ ಆಗೋಕೆ ಬ್ಲೌಸ್‌ ಡಿಸೈನ್‌ ಹುಡುಕ್ತಾ ಇದೀರಾ, ಇಲ್ಲಿದೆ ನೋಡಿ ಐಡಿಯಾ 

By Reshma
Feb 25, 2024

Hindustan Times
Kannada

ಪೆಂಡೆಟ್‌ ಫ್ಯಾಷನ್‌: ಡೀಪ್‌ ನೆಕ್‌ ಫ್ಯಾಷನ್‌ನಲ್ಲಿ ಪೆಂಡೆಂಟ್‌ ಡಿಸೈನ್‌ ಮಾಡಿಸಿದ್ರೆ  ನಿಮ್ಮ ಲುಕ್‌ ಚೇಂಜ್‌ ಆಗೋದ್ರಲ್ಲಿ ಎರಡು ಮಾತಿಲ್ಲ. 

ಲಟ್ಕನ್‌ ಫ್ಯಾಷನ್‌ ಇತ್ತೀಚಿನ ಟ್ರೆಂಡ್‌. ನೀವು ಚೋಲಿ ಅಥವಾ ಬ್ಲೌಸ್‌ಗೆ ಈ ಡಿಸೈನ್‌ ಆಯ್ಕೆ ಮಾಡಬಹುದು. 

ಹೆವಿ ಪೆಂಡೆಂಟ್‌: ಇತ್ತೀಚಿನ ದಿನಗಳಲ್ಲಿ ಸೀರೆ ಸಿಂಪಲ್‌ ಆಗಿದ್ರೂ ಬ್ಲೌಸ್‌ ಗ್ರ್ಯಾಂಡ್‌ ಆಗಿ ಡಿಸೈನ್‌ ಮಾಡಿಸುವುದು ರೂಢಿ. ನೀವು ಪೆಂಟೆಡ್‌ ಡಿಸೈನ್‌ನಲ್ಲೇ ಹೆವಿ ವರ್ಕ್‌ ಇರುವ ಡಿಸೈನ್‌ ಆಯ್ಕೆ ಮಾಡಿಕೊಳ್ಳಬಹುದು. 

ಪಾಮ್‌ ಪಾಮ್‌ ಸ್ಟ್ರಿಂಗ್‌: ಇದು ಕೂಡ ಲೇಟೆಸ್ಟ್‌ ಬ್ಲೌಸ್‌ ಡಿಸೈನ್‌ ಟ್ರೆಂಡ್‌ ಆಗಿದ್ದು, ಮ್ಯಾಚಿಂಗ್‌ ಅಥವಾ ಕಾಂಟ್ರ್ಯಾಸ್ಟ್‌ ಬಣ್ಣದಲ್ಲಿ ಇದನ್ನು ಹೊಲಿಸಿಕೊಳ್ಳಬಹುದು. 

ಟೆಸೆಲ್‌ಗಳಿಂದ ಡಿಸೈನ್‌ ಮಾಡಿರುವುದು ಲೆಹೆಂಗಾ ಹಾಗೂ ಸೀರೆ ಎರಡಕ್ಕೂ ಹೊಂದುತ್ತದೆ. 

ವ್ಯಾಕ್ಸ್ಡ್‌ ಪೆಂಡೆಂಟ್‌ ಡಿಸೈನ್‌ ಟ್ರೆಂಡಿ ಆಗಿ ಕಾಣಿಸುತ್ತದೆ. 

ಸೀರೆಗೆ ಮ್ಯಾಚಿಂಗ್‌ ಇರುವ ಬಟ್ಟೆಗಳೊಂದಿಗೆ ಲಟ್ಕನ್‌ ವಿನ್ಯಾಸವನ್ನು ಡಿಸೈನ್‌ ಮಾಡಿಸಬಹುದು. 

ಬ್ಯಾಕ್‌ಲೆಸ್‌ ಬ್ಲೌಸ್‌ ಕೂಡ ಇತ್ತೀಚಿನ ಟ್ರೆಂಡ್‌. ಇದು ಸೀರೆ, ಲೆಹಂಗಾಕ್ಕೆ ಹೆಚ್ಚು ಹೊಂದುತ್ತದೆ. 

ಕನ್ನಡಿ ಚಿತ್ತಾರ: ರವಿಕೆಯ ಮೇಲೆ ಕನ್ನಡಿ ಚಿತ್ತಾರ ಮೂಡಿಸುವ ಜೊತೆಗೆ ನಿಮ್ಮಿಷ್ಟದ ಡಿಸೈನ್‌ ಮಾಡಿಸಬಹುದು. 

ಮುತ್ತಿನ ಜೋಡಿಸುವಿಕೆ: ರವಿಕೆ ವಿನ್ಯಾಸದಲ್ಲಿ ಮುತ್ತುಗಳನ್ನು ಜೋಡಿಸುವುದು ಇತ್ತೀಚಿನ ಟ್ರೆಂಡ್.‌ ಇದು ನಿಮ್ಮ ಸೀರೆಗೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ. 

ಇದರೊಂದಿಗೆ ತುಂಬು ತೋಳಿನ ಬ್ಲೌಸ್‌ ಕೂಡ ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. 

ಈ ಪ್ರಶ್ನೆ ನಿಮ್ಮಲ್ಲೂ ಮೂಡಿದೆಯಾ? ಪುಸ್ತಕ ಏಕೆ ಚಚ್ಚೌಕವಾಗಿಯೇ ಇರುತ್ತದೆ?