ಡೀಪ್‌ನೆಕ್ ಬ್ಲೌಸ್‌ ಹೊಲಿಸುವ ಮೊದಲು ಈ ಡಿಸೈನ್‌ಗಳನ್ನು ಒಮ್ಮೆ ನೋಡಿಬಿಡಿ

By Reshma
Jul 15, 2024

Hindustan Times
Kannada

ಸೀರೆ ಟ್ರೆಂಡ್‌ ಎಂದಿಗೂ ಮುಗಿಯುವುದಿಲ್ಲ. ಇತ್ತೀಚೆಗೆ ಸೀರೆಗಿಂತ ರವಿಕೆಯೇ ಅಂದ ಹೆಚ್ಚಿಸುತ್ತಿದೆ. ಹೊಸ ಹೊಸ ಫ್ಯಾಷನ್‌ನ ರವಿಕೆಗಳು ಫ್ಯಾಷನ್‌ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. 

ಇತ್ತೀಚಿನ ದಿನಗಳ ಬ್ಲೌಸ್‌ ಡಿಸೈನ್‌ನಲ್ಲಿ ಫ್ರಂಟ್‌ ಡೀಪ್‌ ನೆಕ್‌ ಲುಕ್‌ ಟ್ರೆಂಡ್‌ನಲ್ಲಿದೆ. ಇದು ಹಗುರ ಹಾಗೂ ಭಾರದ ಸೀರೆಗೂ ಹೊಂದುತ್ತದೆ. ನಟಿಯರು ಈ ಟ್ರೆಂಡ್‌ ಅನ್ನು ಹೆಚ್ಚು ಅನುಸರಿಸುತ್ತಿದ್ದಾರೆ. 

ನೀವು ಸೀರೆಗೆ ಬ್ಲೌಸ್‌ ಹೊಲಿಸಲು ಡಿಸೈನ್‌ಗಾಗಿ ನೋಡುತ್ತಿದ್ದರೆ ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ. 

ಫ್ರಂಟ್‌ ಡೀಪ್‌ ನೆಕ್‌ ಶೈಲಿಯಲ್ಲಿ ನೀವು ಈ ರೀತಿಯ ಬ್ಲೌಸ್‌ ಹೊಲಿಸಬಹುದು. ಈ ವಿನ್ಯಾಸವು ನಿಮಗೆ ಸೀರೆ ಮೇಲೆ ಗ್ಲಾಮರ್‌ ಲುಕ್‌ ನೀಡುವಂತೆ ಮಾಡುತ್ತದೆ. 

ಬ್ಲೌಸ್‌ ವಿನ್ಯಾಸದಲ್ಲಿ ವಿ ನೆಕ್‌ ಆಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ವಿನ್ಯಾಸವು ಮುಂಭಾಗದಲ್ಲಿ ಡೀಪ್‌ ಆಗಿ ಕಂಡರೂ ಅಂದ ಹೆಚ್ಚಿಸೋದು ಖಂಡಿತ. 

ಬ್ಲೌಸ್‌ ಡಿಸೈನ್‌ಗೆ ಓವಲ್‌ ಕಟ್‌ ಲುಕ್‌ ಅನ್ನು ಸಹ ನೀವು ಅಳವಡಿಸಿಕೊಳ್ಳಬಹುದು. ತುಂಬಾ ಡೀಪ್‌ ನಿಮಗೆ ಇಷ್ಟವಾಗದಿದ್ದರೆ ಈ ಡಿಸೈನ್‌ ಆಯ್ಕೆ ಮಾಡಬಹುದು. 

ಬನಾರಸಿ ಸೀರೆಯ ಮೇಲೆ ಈ ರೀತಿ ಬ್ಲೌಸ್‌ ಹೊಲಿಸಬಹುದು. ಇದು ಚೋಲಿ ಶೈಲಿಯಲ್ಲಿ ಸುಂದರವಾಗಿ ಕಾಣುತ್ತದೆ. 

ಹಳದಿ ಬ್ಲೌಸ್‌ ಮೇಲೆ ಬಿಳಿ ಲೇಸ್‌ ಅಂಚು ಚೆನ್ನಾಗಿ ಕಾಣುತ್ತದೆ. ಈ ಕುಪ್ಪಸವನ್ನು ಸಹ ನೀವು ಹೊಲಿಸಬಹುದು. 

ಶಾರ್ಪ್‌ ಬ್ಲೌಸ್‌ ವಿನ್ಯಾಸವನ್ನು ವಿ ಶೇಪ್‌ನಲ್ಲೂ ಡಿಸೈನ್‌ ಮಾಡಿಸಬಹುದು. ಇದು ಸೀರೆ ಉಟ್ಟಾಗ ನಿಮಗೆ ಭಿನ್ನ ಲುಕ್‌ ನೀಡುವಂತೆ ಮಾಡೋದು ಖಂಡಿತ. 

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು