ಫುಲ್‌ ಸ್ಲೀವ್ಸ್‌ ಬ್ಲೌಸ್‌ ಹೊಲಿಸೋಕೆ ಇಲ್ಲಿದೆ ಡಿಸೈನ್‌ ಐಡಿಯಾಗಳು

By Reshma
Jun 24, 2024

Hindustan Times
Kannada

ಭಾರತದ ಮಹಿಳೆಯರಿಗೆ ಸೀರೆ ಮೇಲಿನ ಒಲವು ಎಂದಿಗೂ ಕಡಿಮೆಯಾಗುವುದಿಲ್ಲ. ಸೀರೆಗೆ ಲುಕ್‌ ಸಿಗಬೇಕು ಬ್ಲೌಸ್‌ ಡಿಸೈನ್‌ ಚೆನ್ನಾಗಿರಬೇಕು. ಸದ್ಯ ಫುಲ್‌ ಸ್ಲೀವ್‌ನಿಂದ ಕಟ್‌ ಬ್ಲೌಸ್‌ವರೆಗೆ ಸದ್ಯ ಟ್ರೆಂಡ್‌ ಆಗಿದೆ. 

ಒಂದು ಕಾಲದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದ ಫುಲ್‌ ಸ್ಲೀವ್‌ ಡಿಸೈನ್‌ ಇದೀಗ ಮತ್ತೆ ಮೆರೆದಾಡುತ್ತಿದೆ.

ನೀವು ಫುಲ್‌ ಸ್ಲೀವ್‌ ಬ್ಲೌಸ್‌ ಹೊಲಿಸಲು ಡಿಸೈನ್‌ ಹುಡುಕುತ್ತಾ ಇದ್ದೀರಾ, ಹಾಗಿದ್ರೆ ಇಲ್ಲಿರುವ ಐಡಿಯಾಗಳು ನಿಮಗೆ ಇಷ್ಟವಾಗಬಹುದು. 

ಅನನ್ಯಾ ಪಾಂಡೆಯ ಈ ಸ್ಲೀವ್‌ ಡಿಸೈನ್‌ ನಿಮಗೆ ಸಖತ್‌ ಇಷ್ಟ ಆಗಬಹುದು. ಡೀಪ್‌ ನೆಕ್‌ ಇದ್ದು ತುಂಬು ತೋಳಿರುವ ಬ್ಲೌಸ್‌ ಸಖತ್‌ ಟ್ರೆಂಡಿ ಕಾಣಿಸಬಹುದು.

ಹಿನಾ ಖಾನ್‌ ಅವರು ಹಸಿರು ಬಣ್ಣದ ಸೀರೆಗೆ ತುಂಬು ತೋಳಿನ ಬಲೂನ್‌ ಸ್ಲೀವ್ಸ್‌  ಹೊಲಿಸಿದ್ದಾರೆ. ಇದು ಸ್ಲೀವಿಯಾ ಡಿಸೈನ್‌ ಆಗಿದೆ. 

ಚೆಕ್ಸ್‌ ಸೀರೆಯ ಜೊತೆ ಮೌನಿ ರಾಯ್‌ ಉದ್ದ ತೋಳಿನ ಗೆರೆ ಇರುವ ಬ್ಲೌಸ್‌ ಧರಿಸಿದ್ದಾರೆ. ಈ ಸ್ಟೈಲ್‌ ರೆಟ್ರೋ ಲುಕ್‌ ನೀಡುತ್ತೆ.

ವಿ ನೆಕ್‌ ಬ್ಲೌಸ್‌ ಟ್ರೆಂಡ್‌ ಈಗ ಮತ್ತೆ ಚಾಲ್ತಿಯಲ್ಲಿದೆ. ವಿ ನೆಕ್‌ನಲ್ಲಿ ಬಲೂನ್‌ ಸ್ಲೀವ್‌ ಡಿಸೈನ್‌ ಮಾಡಿಸಿದ್ದಾರೆ ಶಿಲ್ಪಾ ಶೆಟ್ಟಿ. 

ಕೆಂಪು ಕತಾರ್‌ ಸೀರೆಯಲ್ಲಿ ನೆಟ್‌ ಬ್ಲೌಸ್‌ ಹೊಲಿಸಿದ್ದಾರೆ. ಕುಟ್‌ ಸ್ಲೀವ್ಸ್‌ ಡಿಸೈನ್‌ ಸೀರೆ ಅಂದ ಹೆಚ್ಚಿಸಿದೆ. 

ಪೂರ್ಣ ತುಂಬು ತೋಳಿನ ಕಸೂತಿ ಇರುವ ಬ್ಲೌಸ್‌ ಹೊಲಿಸಿದ್ದಾರೆ ಮೌನಿರಾಯ್‌. ಇದು  ನಿಮಗೆ ಟ್ರೆಂಡಿ ಲುಕ್‌ ನೀಡುತ್ತದೆ. 

ಕೃತಿ ಸನೋನ್‌ ಅವರ ಈ ಬ್ಲೌಸ್‌ ಡಿಸೈನ್‌ ಮಣಿಕಟ್ಟಿನವರೆಗೆ ಉದ್ದ ಬರುತ್ತದೆ. ಕುತ್ತಿಗೆಯ ಬಳಿ ಅಗಲವಾಗಿ ಸ್ಕ್ವೇರ್‌ ಶೇಪ್‌ ಇರುತ್ತದೆ. 

ಗುಲಾಬಿ ಅಂಚಿನ ಬಿಳಿ ಬಣ್ಣದ ಸೀರೆಯಲ್ಲಿ 7ನೇ ಬಜೆಟ್‌ ಮಂಡಿಸಲಿರುವ ನಿರ್ಮಲಾ ಸೀತಾರಾಮನ್‌

ANI/Twitter