ಲೇಸ್‌ಬ್ಲೌಸ್‌ ಡಿಸೈನ್‌ಗೆ ಸೂಪರ್ ಐಡಿಯಾಗಳು ಇಲ್ಲಿವೆ

By Reshma
Apr 04, 2024

Hindustan Times
Kannada

ಸೀರೆಯ ಅಂದ ದುಪ್ಪಟ್ಟಾಗಬೇಕು ಅಂದ್ರೆ ಬ್ಲೌಸ್‌ ಡಿಸೈನ್‌ ಸೂಪರ್‌ ಆಗಿರಬೇಕು. ಸೀರೆ ಪ್ಲೇಸ್‌ ಆಗಿದ್ದರೂ ಬ್ಲೌಸ್‌ ಡಿಸೈನ್‌ ಸಖತ್‌ ಮಾಡಿಸಿದ್ರೆ ಸೀರೆಯ ಲುಕ್‌ ಚೆಂಜ್‌ ಆಗೋದ್ರಲ್ಲಿ ಡೌಟ್‌ ಇಲ್ಲ. 

ಹಿಂಬದಿಯಲ್ಲಿ ಟೈ ಮಾಡುವ ಬ್ಲೌಸ್‌ ಡಿಸೈನ್‌ಗಳು  ಸದ್ಯ ಟ್ರೆಂಡ್‌ನಲ್ಲಿದೆ. ಒಂದು ಕಾಲದಲ್ಲಿ ಮಿಂಚಿದ್ದ ಸ್ಟ್ರಿಂಗ್‌ ಬ್ಲೌಸ್‌ ಈಗ ಮತ್ತೆ ಚಾಲ್ತಿಯಲ್ಲಿದೆ. ಇದು ಹೊಸ ಟ್ರೆಂಡ್‌ ಆಗಿ ಮಾರುಕಟ್ಟೆಗೆ ಬಂದಿದೆ. 

ಲ್ಯಾನ್ಯಾರ್ಡ್‌ ಡಿಸೈನ್‌: ಇದು ಸಿಂಪಲ್‌ ಡಿಸೈನ್‌ ಅನ್ನಿಸಿದ್ರೂ ಸೀರೆ ಸಖತ್‌ ಲುಕ್‌ ನೀಡುತ್ತೆ. ಬಾಲಿವುಡ್‌ ಸೆಲೆಬ್ರಿಟಿಗಳ ಫೇವರಿಟ್‌ ಡಿಸೈನ್‌ ಇದು ಎನ್ನುವುದು ಸುಳ್ಳಲ್ಲ. 

ಬ್ಯಾಕ್‌ಲೆಸ್‌ ಥ್ರೆಡ್‌ ಡಿಸೈನ್‌: ಬ್ಯಾಕ್‌ಲೆಸ್‌ ಬ್ಲೌಸ್‌ ಇಷ್ಟಪಡುವವರು ನೀವಾದ್ರೆ ನೀವು ಥ್ರೆಡ್‌ ಇರುವ ಬ್ಯಾಕ್‌ಲೆಸ್‌ ಡಿಸೈನ್‌ ಬ್ಲೌಸ್‌ ಟ್ರೈ ಮಾಡಬಹುದು. 

ಸಿಂಗಲ್‌ ಡೋರಿ: ತೆರದ ಬೆನ್ನಿನ ರವಿಕೆ ಡಿಸೈನ್‌ಗೆ ಕೆಳಭಾಗದಲ್ಲಿ ಸಿಂಗಲ್‌ ಡೋರಿ ಅಥವಾ ಥ್ರೆಡ್‌ ಇರುವ ಸ್ಟೈಲಿಶ್‌ ಬ್ಲೌಸ್‌ ಕೂಡ ಡಿಸೈನ್‌ ಮಾಡಿಸಬಹುದು. 

ಜಿಗ್‌ಜಾಗ್‌ ಡೋರಿ: ನೀವು ಸದಾ ಸೀರೆಯ ಬ್ಲೌಸ್‌ಗೆ ಜಿಗ್‌ಜಾಗ್‌ ಡೋರಿ ಡಿಸೈನ್‌ ಮಾಡಿಸಿದ್ರೆ ಅಂದ ಹೆಚ್ಚೋದು ಪಕ್ಕಾ. 

ಹೆವಿ ಲಟ್ಕನ್‌ ಡೋರಿ ಡಿಸೈನ್‌: ನಿಮಗೆ ಬ್ಯಾಕ್‌ಲೇಸ್‌ನಲ್ಲಿ ಹೆವಿ ವರ್ಕ್‌ ಇರುವ ಡಿಸೈನ್‌ ಬೇಕು ಅಂದ್ರೆ ಇದನ್ನು ಟ್ರೈ ಮಾಡಬಹುದು. ಮೀರರ್‌ ವರ್ಕ್‌ ಅಥವಾ ಸೀಕ್ವಿನ್‌ ಇರಿಸಿರುವ ಡಿಸೈನ್‌ ಹೆಚ್ಚು ಒಗ್ಗುತ್ತದೆ. 

ಡಬ್ಬಲ್‌ ಡೋರಿ: ಬೆನ್ನಿನ ಮೇಲ್ಭಾಗ ಹಾಗೂ ಕೆಳಭಾಗ ಎರಡೂ ಕಡೆ ಥ್ರೆಡ್‌ ಇರುವ ತೆರೆದ ಬೆನ್ನಿನ ಬ್ಲೌಸ್‌ ಡಿಸೈನ್‌ ನಿಮಗೆ ಹೆಚ್ಚು ಹೊಂದುತ್ತದೆ. 

ನೆಟ್ಟೆಡ್‌ ಲ್ಯಾನ್ಯಾರ್ಡ್‌ ಡಿಸೈನ್‌: ಹಿಂಭಾಗದಲ್ಲಿ ನೆಟ್ಟೆಡ್‌ ಡಿಸೈನ್‌ ಮಾಡಿಸಿ, ಸಿಂಗಲ್‌ ಥ್ರೆಡ್‌  ಇರಿಸುವ ವಿನ್ಯಾಸ ಸಖತ್‌ ಆಗಿ ಕಾಣುತ್ತದೆ. 

ಫುಲ್‌ಬ್ಯಾಕ್‌ಲೆಸ್‌ ಡೋರಿ ಡಿಸೈನ್‌: ಫುಲ್‌ ಬ್ಯಾಕ್‌ಲೆಸ್‌ ಡಿಸೈನ್‌ ಇರುವ ಬ್ಲೌಸ್‌ಗೆ ಡೋರಿ ಡಿಸೈನ್‌ ಇರಿಸಿ ಅಂದ ಹೆಚ್ಚಿಸಬಹುದು. 

WPL 2025: ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ಆಟಗಾರ್ತಿಯರು