ನವರಾತ್ರಿ ಉಪವಾಸ ಇದ್ದೀರಾ? ಸಿಂಗಾರ ಹಿಟ್ಟಿನ ಆರೋಗ್ಯ ಪ್ರಯೋಜನ ತಿಳಿಯಿರಿ
By Raghavendra M Y
Oct 05, 2024
Hindustan Times
Kannada
ಹೆಚ್ಚಿನ ಜನರು ನವರಾತ್ರಿಯ 9 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಸಾತ್ವಿಕ ಆಹಾರ ಮಾತ್ರ ಸೇವಿಸುತ್ತಾರೆ
ಉಪವಾಸ ಮಾಡುತ್ತಿದ್ದರೆ ನಿಮ್ಮ ಆಹಾರದಲ್ಲಿ ಸಿಂಗಾರ ಹಿಟ್ಟಿನ ಪದಾರ್ಥಗಳು ಇರಲಿ. ಇದರಲ್ಲಿ ಪೌಷ್ಠಿಕಾಂಶಗಳು ಹೆಚ್ಚಿವೆ, ಆರೋಗ್ಯಕ್ಕೂ ಒಳ್ಳೆಯದು
ಸಿಂಗಾರದ ಹಿಟ್ಟಿನಲ್ಲಿ ವಿಟಮಿನ್ ಸಿ, ಬಿ6, ಇ, ಕೆ ಇವೆ. ಸತು, ಫೈಬಲ್ ಹಾಗೂ ಪೋಷಕಾಂಶಗಳಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ಶಕ್ತಿಯನ್ನು ನೀಡುತ್ತೆ
ಇದರಲ್ಲಿ ನಾರಿನಾಂಶ ಉತ್ತಮ ಪ್ರಮಾಣದಲ್ಲಿದೆ. ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಮಲಬದ್ಧತೆಗೆ ಇದು ಪರಿಹಾರವಾಗಿದೆ
ಸಿಂಗಾರದ ಹಿಟ್ಟಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತೆ
ಈ ಪೌಡರ್ ಗ್ಲುಟನ್ ಮುಕ್ತವಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ನೀವು ಉಪವಾಸದ ಆಹಾರವಾಗಿ ಇದನ್ನು ತೆಗೆದುಕೊಳ್ಳಬಹುದು
ಸಿಂಗಾರದ ಹಿಟ್ಟಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ದೇಹದಲ್ಲಿನ ರಕ್ತದ ಕೊರತೆಯನ್ನು ತಡೆಯುತ್ತೆ. ರಕ್ತಹೀನತೆಯಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ
ಸಿಂಗಾರ ಹಿಟ್ಟನ್ನು ಒಣಗಿದ ಸಿಂಗಾರದಿಂದ ತಯಾರಿಸಲಾಗುತ್ತದೆ. ಇದು ಗೋಧಿ ಹಿಟ್ಟಿಗೆ ಉತ್ತಮ ಪರ್ಯಾಯ ಎಂದು ಸಂಶೋಧನೆಗಳು ಹೇಳಿವೆ
ಸಿಂಗಾರದ ಹಿಟ್ಟು ರುಚಿಯ ಜೊತೆಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಲೊವ್ನೀತ್ ಬಾತ್ರಾ ತಿಳಿಸಿದೆ
ಗಮನಿಸಿ: ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅನುಮಾನಗಳಿದ್ದರೆ ತಜ್ಞರ ಸಲಹೆಯನ್ನು ಪಡೆಯಿರಿ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ