ನವರಾತ್ರಿ ವ್ರತಕ್ಕೆ ವಿಶೇಷ ದೋಸೆ ಮಾಡುವ ಸರಳ ವಿಧಾನ ಇಲ್ಲಿದೆ

By Raghavendra M Y
Oct 04, 2024

Hindustan Times
Kannada

ನವರಾತ್ರಿಯ 9 ದಿನಗಳ ಸಮಯದಲ್ಲಿ ಕೆಲವರು ವ್ರತಾಚರಣೆ ಜೊತೆಗೆ ವಿವಿಧ ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ. ನಿಮ್ಮ ಉಪವಾಸದ ಮೆನುವಿನಲ್ಲಿ ದೋಸೆ ಇರಲಿ

ಉಪವಾಸದ ಸಮಯದಲ್ಲಿ ತುಂಬಾ ರುಚಿಕರವಾದ ಮತ್ತು ಸರಳವಾಗಿ ಮಾಡುವಂತಹ ದೋಸೆ ರೆಸಿಪಿಯನ್ನು ತಿಳಿಯಿರಿ

ದೋಸೆ ಮತ್ತು ಪಲ್ಯಕ್ಕೆ ದೋಸೆ ಹಿಟ್ಟು, ಸಾಮೆ ಅಕ್ಕಿ, ಉದ್ದಿನ ಬೇಳೆ, ಮೊಸರು, ಬೇಯಿಸಿದ ಆಲೂಗಡ್ಡೆ, ಜೀರಿಗೆ, ಒಣ ಮಾವಿನ ಪುಡಿ, ಕಲ್ಲು ಉಪ್ಪು, ಹಸಿ ಮೆಣಸಿನಕಾಯಿ,ಕಡಲೆಬೀಜ ಬೇಕಾಗುತ್ತೆ

ಮೊದಲು ಒಂದು ಬಟ್ಟಲು ಸಾಮೆ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಡಿ. ಸ್ವಲ್ಪ ಸಮಯದ ನಂತರ ಇದನ್ನು ಮೊಸರಿನೊಂದಿಗೆ ರುಬ್ಬಿ ಹಿಟ್ಟನ್ನಾಗಿ ತಯಾರಿಸಿಕೊಳ್ಳಿ

ಆಲೂಗಡ್ಡೆಯನ್ನು ಬೇಯಿಸಿದ ನಂತರ ಹೊಟ್ಟು ತೆಗೆದು ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ಮಸಾಲೆಯನ್ನು ಬೆರೆಸಿ ಪ್ರೈ ಮಾಡಿಕೊಳ್ಳಿ. ಇದಕ್ಕೆ ಕಡಲೆಬೀಜ ಸೇರಿಸಿಕೊಳ್ಳಬಹುದು

ಈಗ ದೋಸೆ ಹಿಟ್ಟನ್ನು ತವಾ ಮೇಲೆ ಹಾಕಿ ನಿಮಗೆ ಬೇಕಾದ ರೀತಿಯಲ್ಲಿ ದೋಸೆಯನ್ನು ತಯಾರಿಸಿ. ಸ್ವಲ್ಪ ತುಪ್ಪವನ್ನು ಹಾಕಿ ಮಧ್ಯಮದ ಉರಿಯಲ್ಲಿ ಬೇಯಿಸಿಕೊಳ್ಳಿ

ಸ್ವಲ್ಪ ಆಲೂಗಡ್ಡೆ ಪಲ್ಯವನ್ನು ದೋಸೆಯ ಮೇಲೆ ಇಟ್ಟು ಎರಡೂಕಡೆಯಿಂದ ಮಡಚಿ. ನಿಮ್ಮ ಉಪವಾಸದ ದೋಸೆ ಸಿದ್ಧವಾಗುತ್ತೆ

ಕೊತ್ತಂಬರಿ, ಹಸಿ ಮೆಣಸಿನಕಾಯಿ ಹಾಗೂ ಕಡಲೆಬೀಜ ಚಟ್ನಿಯೊಂದಿಗೆ ದೋಸೆಯನ್ನು ಖುಷಿಯಿಂದ ಸವಿಯಿರಿ

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು