ದಕ್ಷಿಣ ಭಾರತದ ಹಾರ್ಟ್ ಟಚಿಂಗ್ ಲವ್ ಸ್ಟೋರಿ ಸಿನಿಮಾಗಳಿವು

By Raghavendra M Y
Jul 06, 2024

Hindustan Times
Kannada

96-ತಮಿಳಿನಲ್ಲಿ ತೆರೆಕಂಡಿದ್ದ ರೊಮ್ಯಾಂಟಿಕ್ ಸಿನಿಮಾ 96. ತ್ರಿಶಾ, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿನ ಸಿನಿಮಾದಲ್ಲಿ ಒಲವು, ನಲಿವು, ತುಡಿತ, ಮಿಡಿತ, ನಾಚಿಕೆ, ವಿಷಾದಗಳನ್ನ ಕಾಣಬಹುದು

ಅರ್ಜುನ್ ರೆಡ್ಡಿ-ವೈದ್ಯನ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ಅತಿಯಾಗಿ ಕುಡಿ, ಕೋಪಿಷ್ಠ. ತನ್ನ ಪ್ರೇಯಸಿ ಬೇರೆಯವನನ್ನ ಮದುವೆಯಾಗಿದ್ದಾಳೆಂದು ತಿಳಿದಾಗ ಮತ್ತಷ್ತು ಅತಿರೇಕವಾಗಿ ವರ್ತಿಸುತ್ತಾನೆ

ಫಿದಾ-ವಿದೇಶದಲ್ಲಿ ನೆಲೆಸಿರುವ ವೈದ್ಯಕೀಯ ವಿದ್ಯಾರ್ಥಿ ವರುಣ್ ಮತ್ತು ಲವಲವಿಕೆಯ ಯುವತಿ ಭಾನು ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ವೈಯಕ್ತಿಕ ಅಭಿಪ್ರಾಯಗಳು ಇವರ ಸಂಬಂಧದ ಸಮಸ್ಯೆಗೆ ಕಾರಣವಾಗುತ್ತವೆ

ಗೀತಾಂಜಲಿ-ಮಣಿರತ್ನಂ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾ ಇದು. ನಾಗಾರ್ಜುನ ಮತ್ತು ಗಿರಿಜಾ ಚೊಚ್ಚಲ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇಳಯರಾಜ ಸಂಗೀತದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ

ಮಜಿಲಿ-ಪ್ರೇಮಿ ಅಂಶು ತನ್ನನ್ನು ತೊರೆದಾಗ ಖಿನ್ನತೆಗೆ ಒಳಗಾಗುವ ಭರವಸೆಯ ಕ್ರಿಕೆಟಿಗ. ಆದರೆ ತನ್ನ ನೆರೆಹೊರೆಯವರಾದ ಶ್ರಾವಣಿಯನ್ನು ಮದುವೆಯಾಗುತ್ತಾನೆ.  ಇತ್ತೀಚಿನ ಹಾರ್ಟ್ ಟಚಿಂಗ್ ಲವ್ ಸ್ಟೋರಿ ಸಿನಿಮಾಗಳು ಪಟ್ಟಿಯಲ್ಲಿದೆ

ನಿನ್ನು ಕೋರಿ - ಶಿವಾ ನಿರ್ದೇಶದನ ಚೊಚ್ಚಲ ಸಿನಿಮಾ ನಿನ್ನು ಕೋರಿ ರೋಮ್ಯಾಟಿಂಗ್ ಸಿನಿಮಾವಾಗಿದ್ದು, ನಾನಿ, ನಿವೇತಾ ಥಾಮಸ್ ಮತ್ತು ಆದಿ ಪಿನಿಸೆಟ್ಟಿ ನಟಿಸಿದ್ದಾರೆ

ಓಕೆ ಕಣ್ಮಣಿ-ಆದಿ ಮತ್ತು ತಾರಾ ಮದುವೆಯಲ್ಲಿ ಭೇಟಿಯಾಗುತ್ತಾರೆ. ಆಕರ್ಷಿತರಾಗುತ್ತಾರೆ. ಆದರೆ ಮದುವೆಯ ಕಲ್ಪನೆಯನ್ನು ತಿರಸ್ಕರಿಸಿ ಒಟ್ಟಿಗೆ ವಾಸಿಸುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ

ಪ್ರೇಮಂ-ಜಾರ್ಜ್ ಮೊದಲ ಪ್ರೀತಿಯಿಂದ ನಿರಾಸೆಗೊಂಡರೂ ಕಾಲೇಜು ಉಪನ್ಯಾಸಕಿ ಮಲಾರ್ ಅವರೊಂದಿಗೆ ಹೊಸ ಪ್ರಯಾಣವನ್ನು ಆರಂಭಿಸುತ್ತಾರೆ. ಪ್ರೀತಿಯ ಜೀವನ ವಿವಿಧ ಹಂತಗಳ ಮೂಲಕ ಹೋಗುತ್ತೆ

ಯೇ ಮಾಯಾ ಚೇಸವೇ-ಇಂಜಿನಿಯರಿಂಗ್ ಪವೀಧರನಾದ ಕಾರ್ತಿಕ್ ಸಿನಿಮಾ ನಿರ್ಮಾಣದ ಕನಸು ಹೊತ್ತಿರುತ್ತಾನೆ. ತನ್ನ ನೆರೆಮನೆಯ ಜೆಸ್ಸಿಯ ಪ್ರೀತಿಯಲ್ಲಿ ಬೀಳುತ್ತಾನೆ. ವಿಭಿನ್ನ ಧಾರ್ಮಿಕ ಹಿನ್ನೆಲೆ ಜೆಸ್ಸಿಯ ತಂದೆಗೆ ಆಕ್ಷೇಪವನ್ನು ಎದುರಿಸುತ್ತಾರೆ

ಐಪಿಎಲ್‌ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.