ನಟಿ ಶಿಲ್ಪಾ ಶೆಟ್ಟಿಯಂತೆ ಸ್ಲಿಮ್ ಆಗಿರಬೇಕಾ, ಇಲ್ಲಿದೆ ನೋಡಿ ಆಕೆಯ ಡಯೆಟ್ ಪ್ಲಾನ್
By Reshma
Jan 02, 2025
Hindustan Times
Kannada
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ನಟನೆ ಮಾತ್ರವಲ್ಲ ಫಿಟ್‌ನೆಸ್ ಕಾರಣದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ
43 ವರ್ಷದಲ್ಲೂ 20 ಹರೆಯದ ಹುಡುಗಿಯಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ
ಇಷ್ಟೊಂದು ಫಿಟ್ ಆಗಿರುವ ಶಿಲ್ಪಾ ಶೆಟ್ಟಿ ಡಯೆಟ್ ಪ್ಲಾನ್ ಏನಿರಬಹುದು ಅಂತ ನೀವು ಯೋಚನೆ ಮಾಡ್ತಾ ಇರಬಹುದು ಅಲ್ವಾ? ಅದಕ್ಕೆ ಉತ್ತರ ಇಲ್ಲಿದೆ
ಶಿಲ್ಪಾ 1 ಗ್ಲಾಸ್ ನೆಲ್ಲಿಕಾಯಿ ಜ್ಯೂಸ್ ಹಾಗೂ ಪಪ್ಪಾಯ ತಿನ್ನುವ ಮೂಲಕ ದಿನ ಆರಂಭಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ. ಚರ್ಮ ಕೂದಲಿಗೂ ಸಹ ಒಳ್ಳೆಯದು
ಇದಾಗಿ 2 ಗಂಟೆ ಬಳಿಕ 2 ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ತಿನ್ನುತ್ತಾರೆ. ನಂತರ ಎಳನೀರು ಕುಡಿಯುತ್ತಾರೆ
ಮಧ್ಯಾಹ್ನದ ಊಟಕ್ಕೆ ಶಿಲ್ಪಾ ರೊಟ್ಟಿ, ಕಡಲೆಕಾಳು, ಹಸಿರು ತರಕಾರಿ, ಬೇಯಿಸಿದ ಮೊಟ್ಟೆ, ಬ್ರೌನ್ ರೈಸ್ ತಿನ್ನುತ್ತಾರೆ
ಊಟ ಮಾಡಿ 2 ಗಂಟೆಗಳ ಬಳಿಕ ಅವರು ಮಜ್ಜಿಗೆ ಕುಡಿತಾರೆ. ಸಂಜೆಗೆ ಬ್ರೌನ್‌ಶುಗರ್ ಸೇರಿಸಿದ ಚಹಾದೊಂದಿಗೆ ವಾಲ್‌ನಟ್ ಹಾಗೂ ಗೋಡಂಬಿ ತಿನ್ನುತ್ತಾರೆ
ರಾತ್ರಿ ಊಟಕ್ಕೆ ತರಕಾರಿ, ಸಾಲ್ಮನ್ ಸ್ಟೀಕ್, ಸೂಪ್‌ನೊಂದಿಗೆ ಆರೋಗ್ಯಕರ ಸಲಾಡ್ ತಿನ್ನಲು ಇಷ್ಟಪಡುತ್ತಾರೆ ಶಿಲ್ಪಾ
ಊಟ ಮಾಡಿ 1 ಗಂಟೆಯ ನಂತರ ಅವರು 1 ಲೋಟ ಹಾಲು ಕುಡಿಯುತ್ತಾರೆ. ಹಾಲು ಕುಡಿಯವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದು ಆರೋಗ್ಯಕ್ಕೂ ಉತ್ತಮ
ಶಿಲ್ಪಾ ಜಿಮ್‌ನಲ್ಲಿ ಸಾಕಷ್ಟು ವರ್ಕೌಟ್ ಮಾಡುತ್ತಾರೆ. ಸ್ಲಿಮ್ ಆಗಿ ಇರಲು ನಿಯಮಿತವಾಗಿ ವರ್ಕೌಟ್ ಮಾಡುವುದು ಕಾರಣ
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ