15 ದಿನಗಳಲ್ಲಿ ತೂಕ ಇಳಿಬೇಕಾ, ಹಾಗಿದ್ರೆ ಸೌತೆಕಾಯಿ ರಸವನ್ನು ಈ ರೀತಿ ಕುಡಿದು ನೋಡಿ

Pexels

By Reshma
Apr 03, 2024

Hindustan Times
Kannada

ಸ್ಲಿಮ್‌ ಆಗಿ ಬಳಕುವ ಬಳ್ಳಿಯಂತಿರುವುದು ಯಾರಿಗೆ ಇಷ್ಟವಿಲ್ಲ ಹೇಳಿ. ನೀವು ತೂಕ ಇಳಿಕೆಗೆ ಪ್ರಯತ್ನ ಮಾಡ್ತಾ ಇದ್ರೆ ಸೌತೆಕಾಯಿಗಿಂತ ಬೆಸ್ಟ್‌ ಇನ್ನೊಂದಿಲ್ಲ. ಹಲವು ಪೋಷಕಾಂಶಗಳ ಜೊತೆಗೆ ಕ್ಯಾಲೊರಿ ರಹಿತವಾಗಿರುವ ಸೌತೆಕಾಯಿ ಜೀರ್ಣಕ್ರಿಯೆಗೂ ಉತ್ತಮ. 

Pexels

ಅರ್ಧ ಕಪ್ ಕತ್ತರಿಸಿದ ಸೌತೆಕಾಯಿಯಲ್ಲಿ ಕೇವಲ 8 ಗ್ರಾಂಷ್ಟು ಕ್ಯಾಲೋರಿ ಇರುತ್ತದೆ. ಆದರೆ 1.9 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 0.3 ಗ್ರಾಂ ಫೈಬರ್ ಮತ್ತು 0.3 ಗ್ರಾಂ ಪ್ರೊಟೀನ್ ಹೊಂದಿರುತ್ತದೆ. ಇದು ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ.

Pexels

ಸೌತೆಕಾಯಿ ಪ್ರತಿನಿತ್ಯ ಸೇವಿಸುವುದರಿಂದ 15 ದಿನಗಳಲ್ಲಿ ತೂಕ ಇಳಿಯುವುದು ಖಂಡಿತ. ಆದರೆ ಇದನ್ನು ತಿನ್ನಲು ಕೆಲವು ಕ್ರಮಗಳಿವೆ. ಆ ಕ್ರಮಗಳನ್ನು ಅನುಸರಿಸುವ ಮೂಲಕ ಸೌತೆಕಾಯಿಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. 

Pexels

ತೂಕ ಇಳಿಸಿಕೊಳ್ಳಲು ಸೌತೆಕಾಯಿ ತಿನ್ನುವ ಜೊತೆಗೆ ಪ್ರೊಟೀನ್‌ಗಾಗಿ ಚೀಸ್, ಕೋಳಿ, ಮೀನು, ಮಾಂಸ, ತೋಫು, ಕಾಳುಗಳಂತಹ ಆಹಾರವನ್ನು ಸೇವಿಸಬೇಕು. ದಿನದಲ್ಲಿ 3 ಬಾರಿ ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ಇತರ ಸಮಯಗಳಲ್ಲಿ ಹಸಿವಾದಾಗ ಸೌತೆಕಾಯಿ ತಿನ್ನಬೇಕು.

Pexels

 ಸೌತೆಕಾಯಿಯಲ್ಲಿರುವ ಹೆಚ್ಚಿನ ನಾರಿನಾಂಶ ನಿಮ್ಮ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.

Pexels

ಆದರೆ ನಿಮಗೆ ಒತ್ತಡ, ಮಧುಮೇಹದಂತಹ ಸಮಸ್ಯೆ ಅಥವಾ ಗರ್ಭಧಾರಣೆ, ಹಾಲುಣಿಸುವಂತಿದ್ದರೆ, ನೀವು 15 ದಿನಗಳ ಕಾಲ ನಿರಂತರವಾಗಿ ಸೌತೆಕಾಯಿ ತಿನ್ನುವ ಬಗ್ಗೆ ವೈದ್ಯರಿಂದ ತಪ್ಪದೇ ಸಲಹೆ ಪಡೆಯಬೇಕು.  

Pexels

ಬೇಸಿಗೆಯಲ್ಲಿ ನಿಮ್ಮ ಆಹಾರಕ್ರಮದಲ್ಲಿ ಸೌತೆಕಾಯಿ ರಸಕ್ಕೆ ಆದ್ಯತೆ ನೀಡಿ. ಈ ರಸವು ದೇಹವನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ. ಕೆಟ್ಟ ಟಾಕ್ಸಿನ್‌ಗಳು ದೇಹದಿಂದ ಹೊರ ಹೋದರೆ,ತೂಕ ಇಳಿಸುವ ಪ್ರಯತ್ನಕ್ಕೆ ಸಹಾಯವಾಗುತ್ತದೆ. 

Pexels

ಸೌತೆಕಾಯಿ ಬೀಜಗಳು ದೇಹದಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತವೆ. ಸೌತೆಕಾಯಿಯು ಎಥೆನಾಲ್ ಎಂಬ ಅಂಶವನ್ನು ಹೊಂದಿದೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬು ಮತ್ತು ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ನಡುವೆ ನೇರ ಸಂಪರ್ಕವನ್ನು ಹೊಂದಿದೆ.

Pexels

ಆದ್ದರಿಂದ ಈ 7 ದಿನಗಳ ಕಾಲ ನಿಯಮಿತವಾಗಿ ಒಂದು ಲೋಟ ಸೌತೆಕಾಯಿ ರಸವನ್ನು ಸೇವಿಸಿ. ಸಿಪ್ಪೆ ಹಾಗೂ ಬೀಜಗಳ ಸಮೇತ ಇದರ ರಸ ಕುಡಿಯಿರಿ. ಸೌತೆಕಾಯಿ ರಸದ ರುಚಿ ಹೆಚ್ಚಲು ಉಪ್ಪು ಮತ್ತು ಚಾಟ್ ಮಸಾಲವನ್ನು ಸೇರಿಸಬಹುದು.

Pexels

ಸಾಂಪ್ರದಾಯಿಕ ಸೀರೆ ಹಾಗೂ ಆಭರಣ ತೊಟ್ಟು, ಹೆಂಗಳೆಯರ ಮನಸೂರೆಗೊಂಡ ಮಯೂರಿ ಕ್ಯಾತರಿ