ನೀವು ಆಹಾರ ಪ್ರಿಯರಾಗಿದ್ದರೆ ಈ ಹಪ್ಪಳಗಳನ್ನು ಪ್ರಯತ್ನಿಸಲೇಬೇಕು
By Priyanka Gowda Sep 16, 2024
Hindustan Times Kannada
ಊಟದ ಜೊತೆ ಹಪ್ಪಳ ಇದ್ದರೆ ಅದರ ರುಚಿಯೇ ಬೇರೆ. ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಈ ಹಪ್ಪಳ ಬೇಕೇ ಬೇಕು. ಈ ಹಪ್ಪಳದಲ್ಲಿ ಬಗೆ-ಬಗೆಯ ವೆರೈಟಿಗಳಿದ್ದು, ಇವು ಯಾವುವು ಇಲ್ಲಿ ತಿಳಿಯೋಣ.
freepik
ಅಕ್ಕಿ ಹಪ್ಪಳ: ಅಕ್ಕಿಯನ್ನು ರುಬ್ಬಿ ಅದಕ್ಕೆ ಜೀರಿಗೆ, ಉಪ್ಪು ಸೇರಿಸಿ. ಇಡ್ಡಿ ಬೇಯಿಸುವಂತೆ ಹಬೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.
freepik
ಆಲೂ ಹಪ್ಪಳ: ಆಲೂಗಡ್ಡೆಯನ್ನು ಬೇಯಿಸಿ ತಯಾರಿಸಲಾಗುವ ಈ ಗರಿಗರಿಯಾದ ಹಪ್ಪಳವನ್ನು ಪಂಜಾಬ್ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಬಹಳ ಪ್ರಸಿದ್ಧಿ ಪಡೆದಿವೆ.
freepik
ಹಲಸಿನಕಾಯಿ ಹಪ್ಪಳ: ಹಲಸಿನಕಾಯಿಯನ್ನು ಹಬೆಯಲ್ಲಿ ಬೇಯಿಸಿ ಅದನ್ನು ರುಬ್ಬಿ ತಯಾರಿಸಲಾಗುತ್ತದೆ. ಸಂಜೆ ಸ್ನಾಕ್ಸ್ ಆಗಿ ಸವಿಯಲು ಬಹಳ ಚೆನ್ನಾಗಿರುತ್ತದೆ.
freepik
ರಾಗಿ ಹಪ್ಪಳ: ಮಹಾರಾಷ್ಟ್ರದಲ್ಲಿ ಬಹಳ ಜನಪ್ರಿಯವಾಗಿರುವ ಈ ಹಪ್ಪಳವನ್ನು ರಾಗಿಯಿಂದ ತಯಾರಿಸಲಾಗುತ್ತದೆ. ಆರೋಗ್ಯಕ್ಕೂ ಹಿತ, ತಿನ್ನಲೂ ರುಚಿಕರವಾಗಿರುತ್ತದೆ.
freepik
ಬೆಳ್ಳುಳ್ಳಿ ಹಪ್ಪಳ: ಹುರಿದ ಬೆಳ್ಳುಳ್ಳಿ, ಲವಂಗ, ಬೇಳೆಯಿಂದ ಈ ಹಪ್ಪಳವನ್ನು ತಯಾರಿಸಲಾಗುತ್ತದೆ. ಗುಜರಾತ್, ಮಧ್ಯಪ್ರದೇಶದಲ್ಲಿ ಇದು ಬಹಳ ಜನಪ್ರಿಯತೆ ಪಡೆದಿದೆ.
freepik
ಕೇರಳ ಪಾಪಡ್: ನೆರೆಯ ಕೇರಳ ರಾಜ್ಯದಲ್ಲಿ ಇದನ್ನು ಪಪ್ಪಡಮ್ ಎಂದೂ ಕರೆಯುತ್ತಾರೆ. ಇಲ್ಲಿನ ಬಹಳ ಜನಪ್ರಿಯ ಹಪ್ಪಳ ಇದಾಗಿದೆ.
freepik
ಸಬ್ಬಕ್ಕಿ ಹಪ್ಪಳ: ಸಬ್ಬಕ್ಕಿಯನ್ನು ನೀರಿನಲ್ಲಿ 4 ರಿಂದ 5 ಗಂಟೆ ಕಾಲ ನೆನೆಸಿಡಬೇಕು. ನಂತರ ಅದನ್ನು ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಕರಿಮೆಣಸಿನಪುಡಿ, ಉಪ್ಪು ಮಿಶ್ರಣ ಹಾಕಿ ಹಪ್ಪಳ ತಯಾರಿಸಲಾಗುತ್ತದೆ.
freepik
ಕರಿಮೆಣಸು ಹಪ್ಪಳ: ಉದ್ದಿನ ಹಿಟ್ಟು ಹಾಗೂ ಕರಿಮೆಣಸು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಇದನ್ನು ತಯಾರಿಸಲಾಗುತ್ತದೆ. ಪಂಜಾಬ್‍ನಲ್ಲಿ ಬಹಳ ಪ್ರಸಿದ್ಧವಾಗಿದೆ.
freepik
10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು