ಅಕ್ಕಿ- 1 ಕಪ್, ತೆಂಗಿನಕಾಯಿ- 1 ಕಪ್, ತುಪ್ಪ- 2 ಚಮಚ, ಉದ್ದಿನ ಬೇಳೆ- 1 ಚಮಚ, ಸಾಸಿವೆ- ½ ಚಮಚ, ಕೆಂಪು ಮೆಣಸಿನಕಾಯಿ- 1, ಕರಿಬೇವಿನ ಎಲೆ- ಸ್ವಲ್ಪ, ಶುಂಠಿ- ಅರ್ಧ ಇಂಚು, ಉಪ್ಪು ರುಚಿಗೆ ತಕ್ಕಷ್ಟು.
ಮೊದಲಿಗೆ ಅಕ್ಕಿಯನ್ನು ತೊಳೆಯಿರಿ. ಆದ್ಯತೆಗೆ ಅನುಗುಣವಾಗಿ ಪಾತ್ರೆ ಅಥವಾ ಕುಕ್ಕರ್‌ನಲ್ಲಿ ಬೇಯಿಸಿ.
ಸ್ವಲ್ಪ ತುಪ್ಪ ಬಿಸಿ ಮಾಡಿ. ಅದಕ್ಕೆ ಉದ್ದಿನ ಬೇಳೆ, ಸಾಸಿವೆ ಹಾಕಿ. ನಂತರ ಕರಿಬೇವಿನ ಎಲೆ ಹಾಕಿ ಹುರಿಯಿರಿ.
ಒಣ ಮೆಣಸಿನಕಾಯಿ, ತುರಿದ ಶುಂಠಿ ಬೆರೆಸಿ ಪರಿಮಳ ಬರುವವರೆಗೆ ಹುರಿಯಿರಿ. ಬೇಕಿದ್ದರೆ ಗೋಡಂಬಿ ಹಾಕಬಹುದು.
ತುರಿದ ತೆಂಗಿನಕಾಯಿಯನ್ನು ಬೆರೆಸಿ, ಸ್ವಲ್ಪ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಹುರಿಯಿರಿ. ಒಲೆ ಕಡಿಮೆ ಉರಿಯಲ್ಲಿರಲಿ.
ಈ ಮಿಶ್ರಣಕ್ಕೆ ಬೇಯಿಸಿದ ಅನ್ನವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ತೆಂಗಿನಕಾಯಿ ಅನ್ನ ಸವಿಯಲು ಸಿದ್ಧ.
Photo credit: Unsplash