ಬ್ರೆಡ್ ಉಳಿದರೆ ಬಿಸಾಡಬೇಡಿ, ಈ ರೀತಿ ರುಚಿಕರ ತಿನಿಸು ತಯಾರಿಸಿ

By Reshma
Jun 25, 2024

Hindustan Times
Kannada

ಭಾರತದಲ್ಲಿ ಬ್ರೆಡ್‌ ತಿನ್ನುವವರ ಸಂಖ್ಯೆ ಹೆಚ್ಚಿದೆ. ಕೆಲವರು ಬೆಳಗಿನ ಉಪಾಹಾರಕ್ಕೂ ಬ್ರೆಡ್‌ ತಿನ್ನುತ್ತಾರೆ. 

ಬ್ರೆಡ್‌ ಸಹಾಯದಿಂದ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಬಹುದು. ಬ್ರೆಡ್‌ ತಾಜಾ ಇದ್ದಷ್ಟು ರುಚಿ ಹೆಚ್ಚು. 

ಆದರೆ ಬ್ರೆಡ್‌ ಅನ್ನು ಮೂರ್ನ್ಕಾಲು ದಿನ ಇಟ್ಟಷ್ಟು ಅದು ತಾಜಾತನ ಕಳೆದುಕೊಳ್ಳುತ್ತದೆ. ಅದು ಒಣಗಿ ತಿನ್ನಲು ಯೋಗ್ಯವಿಲ್ಲದಂತಾಗುತ್ತದೆ. 

ಒಣಗಿದ ಬ್ರೆಡ್‌ ಅನ್ನು ತಿನ್ನಲು ಆಗದೇ ಎಸೆಯುವವರೇ ಹೆಚ್ಚು. ಆದರೆ ಈ ಬ್ರೆಡ್‌ನಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು. 

ಹಾಗಾದರೆ ಮಿಕ್ಕಿದ ಬ್ರೆಡ್‌ ಅನ್ನು ಹೇಗೆ ಬಳಸಬಹುದು ನೋಡಿ. 

ಒಣ ಬ್ರೆಡ್‌ ತುಂಡುಗಳನ್ನು ಬಳಸಿ ಕುರುಕಲು ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾಡಬಹುದು. 

ಒಣಗಿದ ಬ್ರೆಡ್‌ ಚೂರುಗಳನ್ನು ಬೇಕಿಂಗ್‌ ಶೀಟ್‌ನಲ್ಲಿ ಇರಿಸಿ. ಇದನ್ನ ಓವೆನ್‌ನಲ್ಲಿ 120 ಡಿಗ್ರಿಯಲ್ಲಿ ಬಿಸಿಮಾಡಿ. ನಂತರ ಬ್ಲೆಂಡರ್‌ ಸಹಾಯದಿಂದ ಪುಡಿ ಮಾಡಿ. ಈಗ ನಿಮ್ಮ ಮುಂದೆ ಬ್ರೆಡ್‌ ಕ್ರಂಚ್‌ ಸವಿಯಲು ಸಿದ್ಧ. 

ಸಲಾಡ್‌ ಮತ್ತು ಸೂಪ್‌ಗಳಿಗೆ ಬ್ರೆಡ್‌ ಕ್ರೂಟಾನ್‌ ಸೇರಿಸುತ್ತಾರೆ. ನೀವು ಕೂಡ ಹಳೆಯ ಬ್ರೆಡ್‌ನಿಂದ ಕ್ರೂಟಾನ್‌ ತಯಾರಿಸಬಹುದು. 

ಹಳೆಯ ಬ್ರೆಡ್‌ ಅನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಅದನ್ನು ಆಲಿವ್‌ ಎಣ್ಣೆ, ಚಿಲ್ಲಿ ಫ್ಲೇಕ್ಸ್‌ ಮತ್ತು ನಿಮ್ಮ ನೆಚ್ಚಿನ ಗಿಡಮೂಲಿಕೆಯೊಂದಿಗೆ ಮಿಶ್ರಣ ಮಾಡಿ. 

ಇದನ್ನು ಬೇಕಿಂಗ್‌ ಶೀಟ್‌ ಮೇಲೆ ಹರಡಿ ಮತ್ತು ಸುಮಾರು 175 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ರಿಂದ 20 ನಿಮಿಷ ಬೇಯಿಸಿ. ಈಗ ನಿಮ್ಮ ಮುಂದೆ ಬ್ರೆಡ್‌ ಕೂಟನ್‌ ತಿನ್ನಲು ಸಿದ್ಧ. 

ಹಳೆಯ ಬ್ರೆಡ್‌ ಸಹಾಯದಿಂದ ಸುಲಭವಾಗಿ ಫ್ರೆಂಚ್‌ ಟೋಸ್ಟ್‌ ತಯಾರಿಸಬಹುದು.

ಹಾಲಿನಲ್ಲಿ ಮೊಟ್ಟೆ, ದಾಲ್ಚಿನ್ನಿ ಮತ್ತು ಸ್ವಲ್ಪ ಸಕ್ಕರೆ ಬೆರೆಸಿ ಮಿಶ್ರಣ ತಯಾರಿಸಿ. ಅದರಲ್ಲಿ ಬ್ರೆಡ್‌ ತುಂಡುಗಳನ್ನು ಅದ್ದಿ. ಈ ಬ್ರೆಡ್‌ಗೆ ಎರಡೂ ಕಡೆ ಬೆಣ್ಣೆ ಸವರಿ ಗೋಲ್ಡನ್‌ ಬ್ರೌನ್‌ ಬರುವವರೆಗೂ ಕಾಯಿಸಿ.

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?