ಸಖತ್ ಟೇಸ್ಟಿ ಆಗಿರೋ ಬದನೆಕಾಯಿ ತವಾ ಫ್ರೈ ಮಾಡೋದು ಹೇಗೆ ನೋಡಿ
By Reshma Nov 09, 2024
Hindustan Times Kannada
ಬದನೆಕಾಯಿ ಸಾರು, ಪಲ್ಯ, ಬಜ್ಜಿ (ಚಟ್ನಿ) ಬಹುತೇಕ ಎಲ್ಲರೂ ಮನೆಯಲ್ಲೂ ಮಾಡುತ್ತಾರೆ
ಆದರೆ ಬದನೆಕಾಯಿಯಿಂದ ಏನಾದ್ರೂ ಸ್ಪೆಷಲ್ ರೆಸಿಪಿ ಮಾಡಬೇಕು ಅಂತಿದ್ರೆ ನೀವು ಬದನೆಕಾಯಿ ತವಾ ಫ್ರೈ ಮಾಡಬಹುದು
ಇದು ಫಿಶ್ ಫ್ರೈನಂತೆ ಊಟದ ಜೊತೆ ನೆಂಜಿಕೊಳ್ಳಲು ಸಖತ್ ಆಗಿರುತ್ತೆ. ಊಟಕ್ಕೆ ಏನೂ ಇಲ್ಲ ಎಂದಾಗ ತಟ್ಟಂಥ ಈ ರೆಸಿಪಿ ಮಾಡಬಹುದು
ಇದನ್ನು ಕಡಿಮೆ ಸಾಮಗ್ರಿ ಬಳಸಿ, ಸರಳವಾಗಿ ಮಾಡಬಹುದು. ಆದರೆ ಟೇಸ್ಟ್ ಮಾತ್ರ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ
ಮೊದಲು ಒಂದು ಪ್ಲೇಟ್‌ನಲ್ಲಿ ಕಡಲೆಹಿಟ್ಟು ಹಾಕಿ. ಅದರ ಮೇಲೆ ಉಪ್ಪು, ಅರಿಸಿನ, ಖಾರದಪುಡಿ, ಶುಂಠಿ ಪೇಸ್ಟ್, ಕೊತ್ತಂಬರಿ ಪುಡಿ, ಆಮ್ಚೂರ್ ಪುಡಿ ಹಾಗೂ ಚಿಟಿಕೆ ಇಂಗು ಸೇರಿಸಿ
ಈಗ ಬದನೆಕಾಯಿಯನ್ನ ತೆಳುವಾಗಿ ಬೊಂಡ ಆಕಾರಕ್ಕೆ ಕತ್ತರಿಸಿಕೊಳ್ಳಿ. ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳಿಂದ ತಯಾರಿಸಿ ಪೇಸ್ಟ್‌ನಲ್ಲಿ ಬದನೆಕಾಯಿ ಹೋಳುಗಳನ್ನು ಅದ್ದಿ 10 ರಿಂದ 15 ನಿಮಿಷ ಬದಿಗಿಡಿ
ಈಗ ತವಾಕ್ಕೆ ಎಣ್ಣೆ ಸವರಿ. ಎಣ್ಣೆ ಕೊಂಚ ಜಾಸ್ತಿ ಇರಲಿ. ಎಣ್ಣೆ ಬಿಸಿಯಾದ ಮೇಲೆ ಬದನೆಕಾಯಿಯನ್ನು ಒಂದಾಗಿ ತವಾ ಮೇಲೆ ಇರಿಸಿ, ಎರಡೂ ಕಡೆ ಚೆನ್ನಾಗಿ ಬೇಯಿಸಿ
ಯಾವುದೇ ಕಾರಣಕ್ಕೂ ಬದನೆಕಾಯಿ ಅತಿಯಾಗಿ ಸುಟ್ಟು ಹೋಗಬಾರದು. ಮಧ್ಯೆ ಚೂರು ಎಣ್ಣೆ ಚಿಮುಕಿಸಿ. ಇದರಿಂದ ರುಚಿ ಹೆಚ್ಚುತ್ತದೆ. ಈಗ ತವಾದಿಂದ ತೆಗೆದು ಪ್ಲೇಟ್ ಮೇಲೆ ಹರಡಿ
ಇನ್ನಷ್ಟು ಟೇಸ್ಟ್ ಬೇಕು ಅಂತಿದ್ದರೆ ಸರ್ವ್ ಮಾಡುವಾಗ ಚೂರು ಚಾಟ್ ಮಸಾಲ್ ಚಿಮುಕಿಸಿ, ನಿಂಬೆರಸ ಹಿಂಡಿ
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು