ರುಚಿಗೂ ಸೈ, ಆರೋಗ್ಯಕ್ಕೂ ಸೈ; ಇಲ್ಲಿದೆ ಮಕ್ಕಳಿಗೆ ಇಷ್ಟವಾಗುವ ಬಗೆ ಬಗೆ ಚಿಕ್ಕಿ

By Reshma
Feb 21, 2024

Hindustan Times
Kannada

ಚಿಕ್ಕಿ ಬಾಯಿಗೆ ರುಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಶೇಂಗಾ ಚಿಕ್ಕಿ ಫೇಮಸ್‌ ಆದ್ರೂ ಹಲವು ಬಗೆಯ ಚಿಕ್ಕಿಗಳನ್ನು ನಾವು ಮನೆಯಲ್ಲೂ ತಯಾರಿಸಿ ತಿನ್ನಬಹುದು. 

ಮಕ್ಕಳಿಗೆ ಇಷ್ಟವಾಗುವ ಬಗೆ ಬಗೆಯ ಚಿಕ್ಕಿಗಳನ್ನು ಮನೆಯಲ್ಲೇ ತಯಾರಿಸಿ ಕೊಡಿ. ಯಾವೆಲ್ಲಾ ಚಿಕ್ಕಿಯನ್ನು ಮಾಡಬಹುದು ಅನ್ನೋದಕ್ಕೆ ಮುಂದೆ ನೋಡಿ. 

ಎಳ್ಳಿನ ಚಿಕ್ಕಿ: ಬಿಳಿ ಎಳ್ಳನ್ನು ಹುರಿದು ಬೆಲ್ಲದೊಂದಿಗೆ ಮಿಶ್ರಣ ಮಾಡಿ ಇದನ್ನು ತಯಾರಿಸಲಾಗುತ್ತದೆ. 

ಡ್ರೈಫ್ರೂಟ್‌ ಚಿಕ್ಕಿ: ಬಾದಾಮಿ, ಗೋಡಂಬಿ, ವಾಲ್‌ನಟ್‌, ಶೇಂಗಾ ಈ ಎಲ್ಲವನ್ನೂ ಮಿಶ್ರಣ ಮಾಡಿ ಇದನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಉತ್ತಮ. 

Choco Coorg Spice

ಕಡಲೆ ಚಿಕ್ಕಿ: ಇದನ್ನು ಕಡಲೆಬೇಳೆಯಿಂದ ತಯಾರಿಸಲಾಗುತ್ತದೆ. ಬೆಲ್ಲ ಕಡಲೆಬೇಳೆ ಮಿಶ್ರಣದ ಈ ಚಿಕ್ಕಿ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ 

Amazon

ಮಖಾನಾ ಚಿಕ್ಕಿ: ತೂಕ ಇಳಿಕೆಗೆ ಸಹಾಯ ಮಾಡುವ ಮಖಾನದಿಂದಲೂ ಚಿಕ್ಕಿ ತಯಾರಿಸಬಹುದು. 

ಗುಲಾಬಿ, ಬಾದಾಮಿ ಚಿಕ್ಕಿ: ಒಣಗುಲಾಬಿ ದಳ, ಬಾದಾಮಿಯಿಂದ ಈ ಚಿಕ್ಕಿಯನ್ನು ತಯಾರಿಸಬಹುದು. 

NDTV

ಚಾಕೊಲೇಟ್‌ ಚಿಕ್ಕಿ: ಶೇಂಗಾ, ಚಾಕೊಲೇಟ್‌ ಹಾಗೂ ಬೆಲ್ಲದ ಮಿಶ್ರಣವಿದು. ಇದು ಮಕ್ಕಳಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.    

ಈ ರಾಡಿಕ್ಸ್‌ ಸಂಖ್ಯೆಯವರು ಗಣೇಶನಿಗೆ ಬಹಳ ಪ್ರಿಯ