ಪುದೀನಾವು ಅದರ ಸುವಾಸನೆ ಮತ್ತು ಆರೊಮ್ಯಾಟಿಕ್ ಗುಣಗಳಿಗೆ ಹೆಸರುವಾಸಿಯಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿ. ಇದರಿಂದ ಬಗೆ-ಬಗೆಯ ಖಾದ್ಯ ತಯಾರಿಸಬಹುದು.
freepik
ಪುದೀನಾ ರೈಸ್: ಪಲಾವ್ ಮಾಡುವಂತೆಯೇ ಪುದೀನಾ ರೈಸ್ ಅನ್ನು ಮಾಡಬಹುದು. ಇದು ತಿನ್ನಲು ಸಹ ಬಹಳ ರುಚಿಕರವಾಗಿರುತ್ತದೆ.
freepik
ಪುದೀನಾ ಸ್ಮೂಥಿ: ಪುದೀನಾ ಎಲೆಗಳನ್ನು ರುಬ್ಬಿ, ಇದಕ್ಕೆ ಕತ್ತರಿಸಿದ ಬಾಳೆಹಣ್ಣು, ಎಳನೀರನ್ನು ಮಿಶ್ರಣ ಮಾಡಿ ಸ್ಮೂಥಿ ತಯಾರಿಸಬಹುದು. ಇದು ಆರೋಗ್ಯಕ್ಕೆ ಉತ್ತಮ.
freepik
ಪುದೀನಾ ಚಟ್ನಿ: ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಸ್ವಲ್ಪ, ನಿಂಬೆ ರಸ, ಚಾಟ್ ಮಸಾಲೆಯಿಂದ ಇದನ್ನು ತಯಾರಿಸಲಾಗುತ್ತದೆ.
freepik
ಪುದೀನಾ ಮಂಡಕ್ಕಿ: ಶೇಂಗಾ, ಹಸಿ ಮೆಣಸಿನಕಾಯಿ, ಪುದೀನಾ ಸೊಪ್ಪು, ಕರಿಬೇವು ಸೊಪ್ಪನ್ನು ಎಣ್ಣೆಯಲ್ಲಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ. ಒಗ್ಗರಣೆ ಜೊತೆ ಈ ಮಿಶ್ರಣ ಹಾಗೂ ಮಂಡಕ್ಕಿ ಮಿಶ್ರಣ ಮಾಡಿದರೆ ರುಚಿಕರವಾದ ಭಕ್ಷ್ಯ ಸವಿಯಲು ಸಿದ್ಧ.
freepik
ಪುದೀನಾ ಟೀ: ಪಾತ್ರೆಯಲ್ಲಿ ನೀರಿಟ್ಟು ಅದು ಬಿಸಿಯಾದ ನಂತರ ಶುಂಠಿ, ಪುದೀನಾ ಎಲೆಗಳು, ಚಹಾ ಹುಡಿ, ಸ್ವಲ್ಪ ಬೆಲ್ಲ ಹಾಕಿ ಕುದಿಸಿ, ಸೋಸಿದರೆ ರುಚಿಕರವಾದ ಪುದೀನಾ ಚಹಾ ಸವಿಯಲು ಸಿದ್ಧ.
freepik
ಪುದೀನಾ ರಸಂ: ಟೊಮೆಟೊ ರಸಂ ಮಾಡುವಂತೆಯೇ ಇದನ್ನೂ ಸಹ ತಯಾರಿಸುವುದು. ಪುದೀನಾ ಎಲೆಗಳನ್ನು ಹಾಕಿ ಕುದಿಸಿದರೆ ಈ ರಸಂ ಬಹಳ ರುಚಿಯಾಗಿರುತ್ತದೆ.
freepik
ಪುದೀನಾ ಸೋಡಾ: ಪುದೀನಾ ಎಲೆಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿ. ಇದಕ್ಕೆ ನಿಂಬೆರಸ ಬೆರೆಸಿ, ಸೋಡಾ ಮಿಕ್ಸ್ ಮಾಡಿದರೆ ರುಚಿಕರವಾದ ಪುದೀನಾ ಸೋಡಾ ಸವಿಯಲು ಸಿದ್ಧ.
freepik
ಪುದೀನಾ ಮಜ್ಜಿಗೆ: ಪುದೀನಾ ಎಲೆಗಳು ಹಾಗೂ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಮಜ್ಜಿಗೆಗೆ ಮಿಕ್ಸ್ ಮಾಡಿ ಸವಿಯಬಹುದು.
freepik
10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು