ಕಲ್ಲಂಗಡಿ ಸಿಪ್ಪೆ ಎಸೆಯಬೇಡಿ, ಮಾಡಬಹುದು ಬಗೆಬಗೆ ಖಾದ್ಯ

Slurrp

By Priyanka Gowda
Mar 22, 2025

Hindustan Times
Kannada

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಖರೀದಿ ಹೆಚ್ಚು. ಬಹುತೇಕರು ಇದನ್ನು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ, ಬಿಳಿ ಪದರವಿರುವ ಸಿಪ್ಪೆಯು ಜೀವಸತ್ವಗಳಿಂದ ಸಮೃದ್ಧವಾಗಿದೆ.

Canva

ಕಲ್ಲಂಗಡಿ ಸಿಪ್ಪೆಯ ಆರೋಗ್ಯ ಪ್ರಯೋಜನ ತಿಳಿದ್ರೆ ಇನ್ಮುಂದೆ ಖಂಡಿತ ನೀವು ಎಸೆಯಲ್ಲ. ಅಷ್ಟೇ ಅಲ್ಲ ಇದರಿಂದ ಬಗೆಬಗೆಯ ಖಾದ್ಯ ಮಾಡಬಹುದು. ಯಾವೆಲ್ಲಾ ಖಾದ್ಯ ಮಾಡಬಹುದು ಇಲ್ಲಿದೆ ಮಾಹಿತಿ.

slurrp

ಕಲ್ಲಂಗಡಿ ಸಿಪ್ಪೆ ಸೂಪ್

ಕಲ್ಲಂಗಡಿ ಸಿಪ್ಪೆಯಲ್ಲಿ ನಾರಿನಂಶ ಸಮೃದ್ಧವಾಗಿದೆ. ತೆಂಗಿನಹಾಲು, ಕಲ್ಲಂಗಡಿ ಸಿಪ್ಪೆ, ಈರುಳ್ಳಿ ಮತ್ತು ಶುಂಠಿ ಹಾಕಿ ಸೂಪ್ ತಯಾರಿಸಬಹುದು.

slurrp

ಕಲ್ಲಂಗಡಿ ಸಿಪ್ಪೆ ಕಿಮ್ಚಿ

ಕಲ್ಲಂಗಡಿ ಸಿಪ್ಪೆ, ಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಮತ್ತು ಉಪ್ಪನ್ನು ಬೆರೆಸಿ ತಯಾರಿಸುವ ಕೊರಿಯನ್ ಖಾದ್ಯವಿದು. ಕೆಲವು ದಿನಗಳವರೆಗೆ ಹುದುಗಲು ಬಿಟ್ಟು, ಊಟಕ್ಕೆ ಉಪ್ಪಿನಕಾಯಿಯಂತೆ ಸವಿಯಬಹುದು.

slurrp

ಕಲ್ಲಂಗಡಿ ಸಿಪ್ಪೆ ಕೇಕ್

ಕಲ್ಲಂಗಡಿ ಸಿಪ್ಪೆಯಿಂದ ಕೇಕ್ ಕೂಡ ತಯಾರಿಸಬಹುದು. ಇದು ರುಚಿಕರ ಮತ್ತು ಆರೋಗ್ಯಕರವಾಗಿದೆ.

slurrp

ಕಲ್ಲಂಗಡಿ ಸಿಪ್ಪೆ ಟ್ಯಾಕೋ

ಇದೊಂದು ವಿಶಿಷ್ಟ ಖಾದ್ಯವಾಗಿದ್ದು, ಕಲ್ಲಂಗಡಿ ಸಿಪ್ಪೆಯನ್ನು ಕತ್ತರಿಸಿ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. 

slurrp

ಕಲ್ಲಂಗಡಿ ಸಿಪ್ಪೆ ಸ್ಮೂಥಿ

ಕಲ್ಲಂಗಡಿ ಸಿಪ್ಪೆಯನ್ನು ಮೊಸರು, ಹಣ್ಣುಗಳು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ತಯಾರಿಸಿದರೆ ರುಚಿಕರ ಸ್ಮೂಥಿ ಸಿದ್ಧವಾಗುತ್ತದೆ. 

slurrp

ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ