ಮಕ್ಕಳಿಗೂ ಇಷ್ಟವಾಗುವ ಚೀಸ್‌ ದೋಸೆ ರೆಸಿಪಿಯಿದು

By Reshma
Jun 27, 2024

Hindustan Times
Kannada

ದೋಸೆ ಹಲವರಿಗೆ ಇಷ್ಟ. ಹಾಗಂತ ಒಂದೇ ರುಚಿಯ ದೋಸೆ ಎಷ್ಟು ದಿನ ತಿನ್ನೋಕೆ ಆಗುತ್ತೆ. ದೋಸೆಯಲ್ಲೇ ಡಿಫ್ರೆಂಟ್‌ ರುಚಿ ಬೇಕು ಚೀಸ್‌ ತುರಿದು ಹಾಕಿ ದೋಸೆ ಮಾಡಬಹುದು. ಇದನ್ನು ಚಟ್ನಿ ಅಥವಾ ಚಟ್ನಿ ಪುಡಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. 

ಚೀಸ್‌ ದೋಸೆಗೆ ಬೇಕಾಗುವ ಸಾಮಗ್ರಿಗಳು: ದೋಸೆ ಹಿಟ್ಟು - 1 ಬೌಲ್‌, ಚೀಸ್‌ ಕ್ಯೂಬ್‌ - 1, ಎಣ್ಣೆ - 2 ಚಮಚ, ಉಪ್ಪು - ಚಿಟಿಕೆ

ತೆಳ್ಳಗಿನ ದೋಸೆ ಹಿಟ್ಟು ತಯಾರಿಸಿ ಅದಕ್ಕೆ ಉಪ್ಪು ಬೆರೆಸಿ ಚೆನ್ನಾಗಿ ಕಲೆಸಿ.

ತವಾ ಬಿಸಿ ಮಾಡಿ, ಬಿಸಿಯಾದ ಮೇಲೆ ದೋಸೆ ಹಿಟ್ಟು ಹಾಕಿ ತೆಳ್ಳನೆ ಹರಡಿ. 

ದೋಸೆ ಮೇಲೆ ಸ್ವಲ್ಪ ಎಣ್ಣೆ ಹರಡಿ ದೋಸೆಯನ್ನು ಚೆನ್ನಾಗಿ ಕಾಯಲು ಬಿಡಿ.

ದೋಸೆ ಬೆಂದ ಅನ್ನಿಸಿದಾಗ ಚೀಸ್‌ ತುರಿದು ಹಾಕಿ. ನಂತರ ದೋಸೆಯನ್ನು ಅರ್ಧಕ್ಕೆ ಮಡಿಚಿ. 

ಚಟ್ನಿಯೊಂದಿಗೆ ದೋಸೆಯನ್ನು ಸರ್ವ್‌ ಮಾಡುವ ಮೊದಲು ಕೆಲ ಹೊತ್ತು ಚೀಸ್‌ ಕರಗಲು ಬಿಡಿ. 

ದೇವ ಶಯನಿ ಏಕಾದಶಿ   (ಆಷಾಢ ಏಕಾದಶಿ) ಯಾವಾಗ

pngegg