ಬಾಯಲ್ಲಿ ನೀರೂರಿಸುವ ಹಸಿಮೆಣಸಿನಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ ನೋಡಿ 

By Reshma
Mar 08, 2024

Hindustan Times
Kannada

ಭಾರತೀಯರ ಊಟದಲ್ಲಿ ಉಪ್ಪಿನಕಾಯಿ ಇಲ್ಲ ಅಂದ್ರೆ ಆ ಊಟಕ್ಕೆ ರುಚಿನೇ ಇಲ್ಲ. ಮಾವಿನಕಾಯಿ, ನಿಂಬೆಕಾಯಿ, ಟೊಮೆಟೊ ಹೀಗೆ ಹಲವು ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಹಸಿಮೆಣಸಿನಕಾಯಿ ಉಪ್ಪಿನಕಾಯಿ ಕೂಡ ಒಂದು. 

ನೀವು ಉಪ್ಪಿನಕಾಯಿ ಪ್ರೇಮಿಯಾದ್ರೆ ಈ ಹಸಿಮೆಣಸಿನ ಉಪ್ಪಿನಕಾಯಿ ಖಂಡಿತ ನಿಮಗೆ ಇಷ್ಟ ಆಗುತ್ತೆ. ಇದನ್ನು ನೀವು ಮನೆಯಲ್ಲೂ ಸುಲಭವಾಗಿ ತಯಾರಿಸಬಹುದು. 

ಬೇಕಾಗುವ ಸಾಮಗ್ರಿಗಳು: ಹಸಿಮೆಣಸು - 1ಕಪ್‌ (ಚಿಕ್ಕದಾಗಿ ಹೆಚ್ಚಿದ್ದು), ಜೀರಿಗೆ - 1 ಚಮಚ, ಸೋಂಪು - 1 ಚಮಚ, ಮೆಂತ್ಯೆ - 1 ಚಮಚ, ಅರಿಸಿನ - ಚಿಟಕೆ, ಇಂಗು - ಚಿಟಿಕೆ, ಸಾಸಿವೆ - 1 ಚಮಚ, ಸಾಸಿವೆ ಎಣ್ಣೆ, ವಿನೆಗರ್‌, ಉಪ್ಪು

ತಯಾರಿಸುವ ವಿಧಾನ: ನಾನ್‌ಸ್ಟಿಕ್‌ ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಮೆಂತ್ಯೆ, ಸಾಸಿವೆ, ಜೀರಿಗೆ ಹಾಕಿ ಹುರಿದುಕೊಳ್ಳಿ. 

ಈ ಪದಾರ್ಥಗಳನ್ನು ಒಂದೆರಡು ನಿಮಿಷ ಹುರಿದುಕೊಂಡು ತಣ್ಣಗಾಗಲು ಬಿಡಿ. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 

ಒಂದು ಪಾತ್ರೆಯಲ್ಲಿ ಪುಡಿ ಮಾಡಿಟ್ಟುಕೊಂಡ ಮಸಾಲೆ ಸೇರಿಸಿ ಅದಕ್ಕೆ ಹೆಚ್ಚಿಟ್ಟುಕೊಂಡ ಹಸಿಮೆಣಸು, ಅರಿಸಿನ ಪುಡಿ, ಇಂಗು, ಉಪ್ಪು, ವಿನೇಗರ್‌, ಸಾಸಿವೆ ಎಣ್ಣೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 

ಇದನ್ನು ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಎರಡು ದಿನಗಳ ನಂತರ ನಿಮ್ಮ ಮುಂದೆ ರುಚಿಯಾದ ಹಸಿಮೆಣಸಿನ ಉಪ್ಪಿನಕಾಯಿ ತಿನ್ನಲು ಸಿದ್ಧ. 

ಈ ವಿಷಯ ಗಮನಿಸಿ: ಉಪ್ಪಿನಕಾಯಿ ಹಸಿಮೆಣಸು ಆರಿಸುವ ಮುನ್ನ ತಾಜಾ ಹಸಿಮೆಣಸಿನ ಕಾಯಿಗಳನ್ನು ಮಾತ್ರ ಆರಿಸಿ. 

ಹಸಿಮೆಣಸಿನ ಕಾಯಿಗಳನ್ನು ಚೆನ್ನಾಗಿ ತೊಳೆದು ಒಣಗಿಸಿ, ನಂತರ ಅದನ್ನು ಕತ್ತರಿಸಿ. ಸ್ವಲ್ಪ ನೀರಿನಂಶವಿದ್ದರೂ ಉಪ್ಪಿನಕಾಯಿ ಕೆಡುವುದು ಪಕ್ಕಾ. 

ಉಪ್ಪಿನಕಾಯಿ ತಯಾರಿಸುವಾಗ ವಿನೆಗರ್‌ ಅವಶ್ಯ, ಹಾಗಂತ ಇದನ್ನು ಅತಿಯಾಗಿ ಬಳಸುವುದು ಸರಿಯಲ್ಲ. ಇದರಿಂದಲೂ ಉಪ್ಪಿನಕಾಯಿ ಕೆಡಬಹುದು ಎಚ್ಚರ. 

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು