ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುವ ಮಾಂಸಾಹಾರಗಳು 

By Reshma
Mar 12, 2024

Hindustan Times
Kannada

ಕೂದಲು ಸೊಂಪಾಗಿ ಬೆಳೆಯಲು ಹಾಗೂ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಪೋಷಕಾಂಶಗಳು ಅತ್ಯಗತ್ಯ. ಕೂದಲು ದಟ್ಟವಾಗಿ ಬೆಳೆಯಲು ಕೆಲವು ಮಾಂಸಾಹಾರಗಳು ಸಹಾಯ ಮಾಡುತ್ತವೆ. 

ಕೂದಲಿನ ಆರೋಗ್ಯ ರಕ್ಷಣೆಗೆ ನೆರವಾಗುವ 4 ಮಾಂಸಾಹಾರಗಳಿವು. 

ಸಾಲ್ಮನ್‌ ಮೀನು 

ಸಾಲ್ಮನ್‌ ಮೀನಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಅಂಶ ಅಧಿಕವಾಗಿರುತ್ತದೆ. ಇದು ಕೂದಲನ್ನು ನೆತ್ತಿಯ ಬುಡದಿಂದ ಸದೃಢಗೊಳಿಸುತ್ತದೆ. ಅಲ್ಲದೆ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. 

ಸಿಗಡಿ 

ಸಿಗಡಿಯಲ್ಲಿ ವಿಟಮಿನ್‌ ಬಿ 12, ಕಬ್ಬಿಣಾಂಶ, ಝಿಂಕ್‌ ಹೇರಳವಾಗಿರುವ ಕಾರಣ ನೆತ್ತಿಯ ಆರೋಗ್ಯ ಸುಧಾರಿಸುತ್ತದೆ. ಕೂದಲಿನ ಫಾಲಿಕಲ್‌ಗಳನ್ನು ಸದೃಢವಾಗಿಸಿ, ಕೂದಲ ಬೆಳವಣಿಗೆಗೆ ನೆರವಾಗುತ್ತದೆ. 

ಮೊಟ್ಟೆ 

ಮೊಟ್ಟೆಯಲ್ಲಿ ಪ್ರೊಟೀನ್‌ ಅಂಶ ಸಮೃದ್ಧವಾಗಿದ್ದು, ಇದರಲ್ಲಿ ರೈನೊಫ್ಲಾವಿನ್‌, ನಿಯಾಸಿನ್‌, ಪೊಟ್ಯಾಶಿಯಂ ಅಂಶವಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 

ಚಿಕನ್‌ ಬ್ರೆಸ್ಟ್‌

ಕೋಳಿಯ ಎದೆಭಾಗದಲ್ಲಿ ಲೀನ್‌ ಪ್ರೊಟೀನ್‌, ವಿಟಮಿನ್‌ ಬಿ ಅಂಶ ಸಮೃದ್ಧವಾಗಿದ್ದು, ಕೂದಲು ಉದುರುವುದನ್ನು ತಡೆಯಲು ಸಹಕಾರಿ. ಇದು ಕೂಡ ಕೂದಲಿನ ಬೆಳವಣಿಗೆ ವೃದ್ಧಿಯಾಗಲು ಸಹಾಯ ಮಾಡುತ್ತದೆ.     

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka