ದಿನನಿತ್ಯದ ಆಹಾರದಲ್ಲಿ ಕರಿಬೇವಿನ ಎಲೆ ಸೇರಿಸಲು 10 ಸುಲಭ ಮಾರ್ಗಗಳಿವು
By Raghavendra M Y Jun 15, 2024
Hindustan Times Kannada
ದಕ್ಷಿಣ ಏಷ್ಯಾದ ಆಹಾರದಲ್ಲಿ ಕರಿಬೇವಿನ ಎಲೆಯನ್ನು ಸುವಾಸನೆ ಹಾಗೂ ರುಚಿಗಾಗಿ ಬಳಸಲಾಗುತ್ತದೆ. ಆದರೆ ಇದರಿಂದ ಆರೋಗ್ಯ ಪ್ರಯೋಜಗಳಿವೆ
ಸಾಸಿವೆ, ಜೀರಿಗೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ತಾಜಾ ಕರಿಬೇವಿನ ಎಲೆಗಳನ್ನು ಸಾಂಬರ್ ಹಾಗೂ ಇತರೆ ಪದಾರ್ಥಗಳಲ್ಲಿ ಬಳಸಾಗುತ್ತೆ
ತಾಜಾ ಅಥವಾ ಒಣಗಿದ ಕರಿಬೇವಿನ ಎಲೆಗಳನ್ನ ಬಿಸಿ ನೀರಿನಲ್ಲಿ ಅದ್ದಿ ಹರ್ಬಲ್ ರಿಫ್ರೆಶ್ ಕಪ್ ಟೀಯನ್ನು ತಯಾರಿಸಲಾಗುತ್ತೆ. ಜೇನುತುಪ್ಪ, ನಿಂಬೆ ರಸ ಸೇರಿಸಿದ್ರೆ ರುಚಿ ಮತ್ತಷ್ಚು ಹೆಚ್ಚುತ್ತೆ
ಕರಿಬೇವಿನ ಎಲೆಗಳನ್ನು ನುಣ್ಣಗೆ ಕತ್ತರಿಸಿ ನಿಮ್ಮ ಇಷ್ಟದ ಸಲಾಡ್‌ಗಳಿಗೆ ಮಿಶ್ರಣ ಮಾಡಿಕೊಳ್ಳಬಹುದು. ಆಲಿವ್ ಎಣ್ಣೆ, ನಿಂಬೆ ರಸ, ಬೆಳ್ಳುಳ್ಳಿ, ಉಪ್ಪು, ಮೆಣಸನ್ನ ಸೇರಿಸಿಕೊಳ್ಳಬಹುದು
ಬಿಸಿಯಾದ ಸೂಪ್‌ಗಳಿಗೆ ಕತ್ತರಿಸಿದ ಕರಿಬೇವಿನ ಎಲೆಗಳನ್ನು ಸಿಂಪಡಿಸಬಹುದು. ಆಗ ಸೂಪ್‌ನ ಪರಿಮಳ ಹೆಚ್ಚಾಗುತ್ತದೆ
ಯಾವುದೇ ರೀತಿಯ ಫ್ರೈಗಳಿಗೆ ತಾಜಾ ಕರಿಬೇವಿನ ಎಲೆಗಳನ್ನು ಸೇರಿಸಲಾಗುತ್ತೆ. ತರಕಾರಿ, ಮಾಂಸದ ಕರಿ ಅಥವಾ ಸಾಂಬರ್‌ಗಳಿಗೆ ಕರಿಬೇವು ಇರಲೇಬೇಕು
ಪೌಷ್ಠಿಕಾಂಶ ಹೆಚ್ಚಿಸಲು ತಾಜಾ ಕರಿಬೇವಿನ ಎಲೆಗಳನ್ನು ಉಪಹಾರದಲ್ಲಿ ಸೇರಿಸಿಕೊಳ್ಳಬಹುದು. ಎಲೆಯ ಕಹಿ ಕಡಿಮೆ ಮಾಡಲು ಅನಾನಸ್, ಮಾವು ಬಾಳೆಹಣ್ಣನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು
ಬಿರಿಯಾನಿ, ಪಲಾವ್, ಟೊಮೆಟೊ ಬಾತ್, ಪುಳಿಯೋಗರೆ, ಲೆಮನ್ ರೈಸ್ ಸೇರಿದಂತೆ ಯಾವುದೇ ರೀತಿಯ ಆಹಾರಗಳನ್ನು ತಯಾರಿಸಲು ಕರಿಬೇವಿನ ಎಲೆಗಳನ್ನು ಬಳಸಲಾಗುತ್ತೆ
ಮನೆ ಅಥವಾ ಹೋಟೆಲ್‌ಗಳಲ್ಲಿ ಚಟ್ನಿಗಳನ್ನು ತಯಾರಿಸಲಾಗುತ್ತೆ. ಆದರೆ ಚಟ್ನಿಯ ರುಚಿ ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಸಲಾಗುತ್ತೆ
ಭಾರತದ ದೇಸಿ ತಳಿ ರಾಸುಗಳ
ಬಗ್ಗೆ ಗೊತ್ತೆ
ಇದು ಮಹಾರಾಷ್ಟ್ರದ ಲಾಲ್ ಕಠಾರಿ