ತೂಕ ಇಳಿಕೆಗೆ ಸಹಕಾರಿಯಾಗುವ ಉಪಹಾರ ಭಕ್ಷ್ಯಗಳಿವು

freepik

By Priyanka Gowda
Sep 12, 2024

Hindustan Times
Kannada

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಬೆಳಗ್ಗೆ ಈ ಉಪಹಾರ ಭಕ್ಷ್ಯಗಳನ್ನು ಸೇವಿಸಬಹುದು. ಇವು ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ.

freepik

ರವೆ ಹಾಗೂ ತರಕಾರಿಗಳನ್ನು ಹಾಕಿ ತಯಾರಿಸಿರುವ ಉಪ್ಮಾವು ಫೈಬರ್‌ನಿಂದ ಸಮೃದ್ಧವಾಗಿದೆ. ಇವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೀಗಾಗಿ ತೂಕ ಇಳಿಕೆಗೆ ಸಹಕಾರಿ. 

freepik

ಹೆಸರು ಕಾಳು ದೋಸೆಯು ತುಂಬಾನೆ ಸರಳವಾದ ರೆಸಿಪಿಯಾಗಿದ್ದು, ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತವೆ. ಇದು ಕೂಡ ತೂಕ ನಷ್ಟಕ್ಕೆ ಸೂಕ್ತವಾಗಿದೆ.

freepik

ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಅವಲಕ್ಕಿಯೂ ಒಂದು. ತರಕಾರಿ ಸೇರಿಸಿ ತಯಾರಾಗುವ ಅವಲಕ್ಕಿಯು ಪೌಷ್ಟಿಕಾಂಶಭರಿತವಾಗಿದ್ದು, ಕಾರ್ಬೋಹೈಡ್ರೇಟ್‍ಗಳು ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. 

ಅಕ್ಕಿ ಮತ್ತು ಉದ್ದಿನಬೇಳೆಯಿಂದ ತಯಾರಿಸಲಾಗುವ ಇಡ್ಲಿಯನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಪ್ರತಿ ಮನೆಯಲ್ಲೂ ತಯಾರಿಸಲಾಗುತ್ತದೆ. ಇದು ಕೂಡ ತೂಕ ಇಳಿಕೆಗೆ ಸಹಕಾರಿ. 

freepik

ಓಟ್ಸ್ ಉಪ್ಮಾವು ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಸಹಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ತೂಕ ನಿರ್ವಹಣೆಗೆ ಸಹಕಾರಿ.

ಮೊಸರು ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದಕ್ಕೆ ಹಣ್ಣುಗಳು, ಒಣ ಹಣ್ಣುಗಳು ಮತ್ತು ಬೀಜಗಳನ್ನು ಮಿಕ್ಸ್ ಮಾಡಿ ಉಪಹಾರವಾಗಿ ಸೇವಿಸಬಹುದು. 

freepik

ಇಡ್ಲಿಯನ್ನೇ ಹೋಲುವ ರವಾ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಪೌಷ್ಠಿಕಾಂಶಭರಿತವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಇವು ಹೊಂದಿದ್ದು, ತೂಕ ಇಳಿಕೆಗೆ ಸಹಕಾರಿಯಾಗಿದೆ. 

ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಮಾಡಲಾಗುವ ಉದ್ದಿನ ದೋಸೆಯು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ತೂಕ ಇಳಿಕೆಗೆ ಸಹಕಾರಿಯಾಗಿದೆ.

freepik

ಸಿರಿಧಾನ್ಯಗಳು ಹಾಗೂ ತರಕಾರಿಗಳನ್ನು ಹಾಕಿ ಮಾಡಲಾಗುವ ಪಲಾವ್ ಪೌಷ್ಠಿಕಾಂಶಯುಕ್ತವಾಗಿದ್ದು, ಅಧಿಕ ನಾರಿನಂಶವನ್ನು ಹೊಂದಿದೆ. ತೂಕ ನಿರ್ವಹಣೆಗೆ ಇದು ಸೂಕ್ತವಾಗಿದೆ.

freepik

ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು

freepik