ಪರೋಟ ರುಚಿ ಹೆಚ್ವಿಸುವ 7 ಬಗೆಯ ಚಟ್ನಿಗಳಿವು, ರೆಸಿಪಿಯೂ ಇಲ್ಲಿದೆ

Pinterest

By Priyanka Gowda
Jan 09, 2025

Hindustan Times
Kannada

ಪರೋಟ ತಿನ್ನುವಾಗ ಜೊತೆಗೆ ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಪರೋಟದೊಂದಿಗೆ ತಿನ್ನಬಹುದಾದ 7 ಬಗೆಯ ಚಟ್ನಿ ರೆಸಿಪಿಗಳು ಇಲ್ಲಿವೆ.

Pinterest

ಕೊತ್ತಂಬರಿ ಚಟ್ನಿ: ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಇವೆಲ್ಲವನ್ನೂ ಮಿಕ್ಸಿ ಜಾರಿಗೆ ರುಬ್ಬಿಕೊಂಡರೆ ರುಚಿಕರವಾದ ಕೊತ್ತಂಬರಿ ಚಟ್ನಿ ಸಿದ್ಧ.

Pinterest

ಬೆಳ್ಳುಳ್ಳಿ ದಂಟಿನ ಚಟ್ನಿ: ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ದಂಟು, ನಿಂಬೆ ರಸ, ಜೀರಿಗೆ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ರುಬ್ಬಿಕೊಂಡರೆ ಚಟ್ನಿ ಸವಿಯಲು ಸಿದ್ಧ.

Pinterest

ರಾಜಸ್ತಾನಿ ಶೈಲಿಯ ಬೆಳ್ಳುಳ್ಳಿ ಚಟ್ನಿ: ಒಣಮೆಣಸು, ಲವಂಗ, ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಅಡುಗೆ ಎಣ್ಣೆ ಸೇರಿಸಿ ತಯಾರಿಸಲಾಗುವ ಈ ಚಟ್ನಿಯು ಬಹಳ ರುಚಿಕರವಾಗಿರುತ್ತದೆ. ಇದು ಬೇಗನೆ ಕೆಡುವುದಿಲ್ಲ.

Pinterest

ಟೊಮೆಟೊ-ಬೆಳ್ಳುಳ್ಳಿ ಚಟ್ನಿ: ಬೆಳ್ಳುಳ್ಳಿ, ಟೊಮೆಟೊ, ಸಾಸಿವೆ, ಒಣಮೆಣಸಿನಕಾಯಿ, ರುಚಿಗೆ ಉಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿ ಈ ಚಟ್ನಿಯನ್ನು ತಯಾರಿಸಲಾಗುತ್ತದೆ.

Pinterest

ಮಾವಿನಕಾಯಿ ಚಟ್ನಿ: ಮಾವಿನಕಾಯಿ, ಹಸಿ ಅಥವಾ ಒಣಮೆಣಸಿನಕಾಯಿ, ಬಿರಿಯಾನಿ ಎಲೆ, ಕಾಳುಮೆಣಸು, ಲವಂಗ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿದರೆ ಚಟ್ನಿ ಸಿದ್ಧ.

Pinterest

ಮೆಣಸಿನಕಾಯಿ ಚಟ್ನಿ: ಒಣಮೆಣಸು, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಹಿಂಡಿ ಈ ಚಟ್ನಿಯನ್ನು ತಯಾರಿಸಲಾಗುತ್ತದೆ. ಪರೋಟಗೆ ನೆಂಚಿಕೊಳ್ಳಲು ರುಚಿಯಾಗಿರುತ್ತದೆ.

Pinterest

ಪುದೀನಾ ಚಟ್ನಿ: ಪುದೀನಾ ಸೊಪ್ಪು, ಜೀರಿಗೆ, ಈರುಳ್ಳಿ, ಮೊಸರು ಸೇರಿಸಿ ಈ ಚಟ್ನಿಯನ್ನು ತಯಾರಿಸಲಾಗುತ್ತದೆ. ಇದು ಕೂಡ ಪರೋಟಗೆ ಉತ್ತಮ ಕಾಂಬಿನೇಷನ್.

Pinterest

ಸಂಜೆ ನಂತರ ಹೂಗಳು, ಎಲೆಗಳನ್ನು ಏಕೆ ಕೀಳಬಾರದು?