ಬೀಟ್ರೂಟ್‌ನ ರುಚಿಕರ ಪಾಕವಿಧಾನಗಳು ಇಲ್ಲಿವೆ

Image Credits: Adobe Stock

By Priyanka Gowda
Feb 11, 2025

Hindustan Times
Kannada

ರುಚಿಯೂ ಇರಬೇಕು, ಆರೋಗ್ಯಕರವೂ ಆಗಿರಬೇಕು ಎಂದರೆ ಬೀಟ್ರೂಟ್‌ನ ಈ 5 ಪಾಕವಿಧಾನಗಳನ್ನು ಪ್ರಯತ್ನಿಸಿ. ತೂಕ ಇಳಿಕೆಗೂ ಇದು ಸಹಕಾರಿ.

Image Credits: Adobe Stock

ಬೀಟ್ರೂಟ್ ಸ್ಮೂಥಿ

Image Credits: Adobe Stock

ಬೀಟ್ರೂಟ್ ಸ್ಮೂಥಿ ಆರೋಗ್ಯಕರ ಪಾನೀಯವಾಗಿದೆ. ಹಸಿ ಬೀಟ್ರೂಟ್‌ಗೆ ಬಾಳೆಹಣ್ಣು, ಸೇಬು ಅಥವಾ ಬೆರ್ರಿಗಳಂತಹ ಹಣ್ಣುಗಳನ್ನು ಮಿಶ್ರಣ ಮಾಡಿ. ಮೊಸರು ಅಥವಾ ಬಾದಾಮಿ ಹಾಲು ಬೆರೆಸಿ ಸೇವಿಸಬಹುದು.

Image Credits : Adobe Stock

ಬೀಟ್ರೂಟ್ ಸಲಾಡ್

Image Credits: Adobe Stock

ಬೀಟ್ರೂಟ್ ಸಲಾಡ್ ತಯಾರಿಸುವುದು ಬಹಳ ಸುಲಭ. ಬೇಯಿಸಿದ ಅಥವಾ ಹಸಿ ಬೀಟ್ರೂಟ್‍ಗೆ ಬೀಜಗಳು, ಪುದೀನಾ ಸೊಪ್ಪು, ಮೊಳಕೆ ಕಾಳುಗಳು, ನಿಂಬೆ ರಸ, ಜೇನುತುಪ್ಪ ಬೆರೆಸಿ ತಿನ್ನಬಹುದು.

Image Credits: Adobe Stock

ಬೀಟ್ರೂಟ್ ರಾಯಿತ

Image Credits: Adobe Stock

ಬೀಟ್ರೂಟ್ ತುರಿದು ಬೇಯಿಸಬೇಕು. ಅದಕ್ಕೆ ಮೊಸರು, ಜೀರಿಗೆ ಮತ್ತು ಚಿಟಿಕೆ ಉಪ್ಪನ್ನು ಬೆರೆಸಿ ತಿಂದರೆ ಬಹಳ ರುಚಿಕರವಾಗಿರುತ್ತದೆ. ಊಟಕ್ಕೆ ಸೈಡ್ ಡಿಶ್ ಆಗಿ ಬಡಿಸಬಹುದು.  

Image Credits: Adobe Stock

ಬೀಟ್ರೂಟ್ ಪರೋಟ

Image Credits: Adobe Stock

ತುರಿದ ಬೀಟ್ರೂಟ್ ಅನ್ನು ಗೋಧಿ ಹಿಟ್ಟು, ಮಸಾಲೆಗಳು ಮತ್ತು ನೀರಿನೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಿ. ನಂತರ ಚಪಾತಿಯಂತೆ ಲಟ್ಟಿಸಿ ಬೇಯಿಸಿದರೆ ರುಚಿಕರ ಬೀಟ್ರೂಟ್ ಪರೋಟ ತಿನ್ನಲು ಸಿದ್ಧ.

Image Credits: Adobe Stock

ಬೀಟ್ರೂಟ್ ಅನ್ನ

Image Credits: Adobe Stock

ತುರಿದ ಅಥವಾ ಕತ್ತರಿಸಿದ ಬೀಟ್ರೂಟ್‍ನೊಂದಿಗೆ ಅಕ್ಕಿಯನ್ನು ಬೇಯಿಸಿ. ಬೀಟ್ರೂಟ್, ಅನ್ನಕ್ಕೆ ಸುಂದರವಾದ ಗುಲಾಬಿ ಬಣ್ಣವನ್ನು ತುಂಬುತ್ತದೆ. ಇದನ್ನು ಪಲ್ಯದೊಂದಿಗೆ ಅಥವಾ ಹಾಗೆಯೇ ತಿನ್ನಬಹುದು, ರುಚಿಗಾಗಿ ಒಗ್ಗರಣೆ ಹಾಕಿ.

Image Credits: Adobe Stock

Mysterious Birds: ಕತ್ತಲಿನಲ್ಲಿ ಬೇಟೆಯಾಡುವ ಪಕ್ಷಿಗಳು ಇವು!

PEXELS