ಬೀಟ್ರೂಟ್ ಚಿಪ್ಸ್ ರೆಸಿಪಿ: ಮನೆಯಲ್ಲಿಯೇ ಈ ಕುರುಕುಲಾದ ತಿಂಡಿಯನ್ನು ಹೀಗೆ ತಯಾರಿಸಿ 

Canva

By Priyanka Gowda
Nov 12, 2024

Hindustan Times
Kannada

ಬೇಕರಿಯಲ್ಲಿ ತಯಾರಿಸಲಾಗುವ ಚಿಪ್ಸ್ ತಿನ್ನುವ ಬದಲು ಆರೋಗ್ಯಕರವಾಗಿ ಬೀಟ್ರೂಟ್ ಚಿಪ್ಸ್ ಅನ್ನು ತಯಾರಿಸಿ ತಿನ್ನಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ.

Canva

ಬೇಕಾಗುವ ಪದಾರ್ಥಗಳು: ಬೀಟ್ರೂಟ್- 3, ಆಲಿವ್ ಎಣ್ಣೆ- 1 ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕರಿಮೆಣಸು- ½ ಟೀ ಚಮಚ, ಚಾಟ್ ಮಸಾಲೆ- ಚಿಟಿಕೆ.

Canva

ಬೀಟ್ರೂಟ್‌ಗಳನ್ನು ತೆಳುವಾಗಿ ಹೋಳುಗಳಾಗಿ ಕತ್ತರಿಸಿ. ಎಲ್ಲವನ್ನೂ ರೌಂಡ್ ಆಗಿ ಮ್ಯಾಂಡೋಲಿನ್ ಸ್ಲೈಸರ್‌ನಲ್ಲಿ ಕತ್ತರಿಸಬಹುದು.

Canva

ಬಾಣಲೆಗೆ ಆಲಿವ್ ಎಣ್ಣೆ ಹಾಕಿ, ಕಾದ ನಂತರ ಬೀಟ್ರೂಟ್ ಚೂರುಗಳನ್ನು ಕರಿಯಿರಿ. ಗರಿಗರಿಯಾದ ನಂತರ ಇದಕ್ಕೆ ಉಪ್ಪು, ಕರಿಮೆಣಸು, ಚಾಟ್ ಮಸಾಲೆ ಬೆರಿಸಿ

Canva

ಓವೆನ್‌ನಲ್ಲಿ ಬೇಯಿಸುವುದಾದರೆ ಕತ್ತರಿಸಿದ ಬೀಟ್ರೂಟ್‌ಗೆ ಆಲಿವ್ ಎಣ್ಣೆ, ಉಪ್ಪು, ಕರಿಮೆಣಸು, ಚಾಟ್ ಮಸಾಲೆ ಸೇರಿಸಿ ಮಿಕ್ಸ್ ಮಾಡಿ.

Canva

ಓವೆನ್ ಅನ್ನು ಮೊದಲಿಗೆ 180 ಡಿಗ್ರಿ ಸೆಲ್ಸಿಯಸ್‍ಗೆ ಬಿಸಿ ಮಾಡಿ. ನಂತರ ಬೇಕಿಂಗ್ ಟ್ರೇನಲ್ಲಿ ಹಾಕಿ 20 ರಿಂದ 25 ನಿಮಿಷಗಳ ಕಾಲ ಬೇಯಿಸಿ. ಗರಿಗರಿಯಾಗಲು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.

Canva

ಈಗ ಗರಿಗರಿಯಾದ, ರುಚಿಕರವಾದ ಬೀಟ್ರೂಟ್ ಚಿಪ್ಸ್ ಸವಿಯಲು ಸಿದ್ಧ.

Canva

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ