ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ

By Priyanka Gowda
Feb 17, 2025

Hindustan Times
Kannada

ಚಿಕನ್ ಅಥವಾ ಮಟನ್ ಬಿರಿಯಾನಿ ಮಾಂಸಾಹಾರ ಪ್ರಿಯರ ಅಚ್ಚುಮೆಚ್ಚಿನ ಖಾದ್ಯ. ಬಿರಿಯಾನಿ ತಯಾರಿಸಲು ಮಸಾಲೆ ಬೇಕು. ಇದನ್ನು ಅಂಗಡಿಯಿಂದ ಖರೀದಿಸುವುದರ ಬದಲು ಮನೆಯಲ್ಲೇ ತಯಾರಿಸಬಹುದು.

ಬಿರಿಯಾನಿ ಮಸಾಲೆ ತಯಾರಿಸಲು ಎಲ್ಲಾ ಮಸಾಲೆಗಳನ್ನು ಬಳಸಲಾಗುತ್ತದೆ.

ಮನೆಯಲ್ಲಿ ಮಾಡುವ ಬಿರಿಯಾನಿ ರೆಸ್ಟೋರೆಂಟ್‌ನಂತಹ ರುಚಿ ಬರಬೇಕೆಂದರೆ ಈ ಮಸಾಲೆಯನ್ನು ನೀವು ತಯಾರಿಸಬಹುದು.

Pexel

ಇದಕ್ಕಾಗಿ ಕೊತ್ತಂಬರಿ ಬೀಜ, ಸೋಂಪು, ಜೀರಿಗೆ, ಲವಂಗ, ಕಾಳುಮೆಣಸು, ನಕ್ಷತ್ರ ಕೋಡು, ದೊಡ್ಡ ಮತ್ತು ಸಣ್ಣ ಏಲಕ್ಕಿ, ದಾಲ್ಚಿನ್ನಿ, ಬಿರಿಯಾನಿ ಎಲೆ ಅಗತ್ಯವಿದೆ.

ಅಷ್ಟೇ ಅಲ್ಲ ಜಾಯಿಕಾಯಿ, ಜಾಯಿತ್ರಿ, ಒಣಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ ಹಾಗೂ ಅರಿಶಿನ ಪುಡಿ, ಇವಿಷ್ಟೂ ಮಸಾಲೆಗಳು ಇರಲೇಬೇಕು. 

ಈ ಎಲ್ಲಾ ಮಸಾಲೆಗಳನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಇದು ಪರಿಮಳ ಬರಲಾರಂಭಿಸಿದಾಗ ಸ್ಟವ್ ಆಫ್ ಮಾಡಿ, ತಣ್ಣಗಾಗಲು ಬಿಡಿ.

ನಂತರ ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿದರೆ ಬಿರಿಯಾನಿ ಮಸಾಲೆ ಪುಡಿ ಸಿದ್ಧ.

ಚಿಕನ್ ಅಥವಾ ಮಟನ್ ಬಿರಿಯಾನಿ ಮಾಡುವಾಗ ಈ ಮಸಾಲೆಯನ್ನು ಬೆರೆಸಿ ತಯಾರಿಸಿ. ಬಿರಿಯಾನಿ ತುಂಬಾ ರುಚಿಕರವಾಗಿ ಬರುತ್ತದೆ.

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌