ಬ್ರೆಡ್ ಪಕೋಡ: ಸಂಜೆ ಚಹಾ ಜೊತೆಗೆ ಸೇವಿಸಲು ಬೆಸ್ಟ್‌ ಆಯ್ಕೆ ಇದು

Pinterest

By Priyanka Gowda
Mar 20, 2025

Hindustan Times
Kannada

ಬ್ರೆಡ್ ಪಕೋಡ ಗರಿಗರಿಯಾದ ತಿಂಡಿಯಾಗಿದ್ದು, ಸಂಜೆ ಚಹಾ ಜೊತೆ ತಿನ್ನಲು ಬೆಸ್ಟ್ ಆಯ್ಕೆ. ಈ ಕುರುಕಲು ತಿಂಡಿಯನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

Pinterest

ಬೇಕಾಗುವ ಪದಾರ್ಥಗಳು 

6 ಬ್ರೆಡ್ ತುಂಡು, 1 ಕಪ್ ಕಡಲೆಹಿಟ್ಟು, ಕಾಲು ಕಪ್ ಅಕ್ಕಿ ಹಿಟ್ಟು, ಅರ್ಧ ಚಮಚ ಅರಶಿನ ಪುಡಿ ಮತ್ತು ಮೆಣಸಿನ ಪುಡಿ, ಕಾಲು ಚಮಚ ಜೀರಿಗೆ ಪುಡಿ ಮತ್ತು ಗರಂ ಮಸಾಲೆ, ಕಾಲು ಚಮಚ ಸೋಡಾ ಬೈಕಾರ್ಬನೇಟ್, ಅರ್ಧ ಕಪ್ ನೀರು, ಕರಿಯಲು ಎಣ್ಣೆ.

Pinterest

ಮಾಡುವ ವಿಧಾನ

ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ನೀರು ಮತ್ತು ಎಲ್ಲಾ ಮಸಾಲೆಗಳನ್ನು ಮಿಶ್ರಣ ಮಾಡಿ. ಹಿಟ್ಟು ತುಂಬಾ ತೆಳುವಾಗಿರಬಾರದು.

Pinterest

ಬ್ರೆಡ್ ಅನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ಪ್ರತಿ ಬ್ರೆಡ್ ತುಂಡನ್ನು ಹಿಟ್ಟಿನಲ್ಲಿ ಅದ್ದಿ.

Pinterest

ಬಾಣಲೆಯನ್ನು ಒಲೆ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಹಿಟ್ಟಿನಲ್ಲಿ ಅದ್ದಿದ ಬ್ರೆಡ್ ತುಂಡನ್ನು ಡೀಪ್ ಫ್ರೈ ಮಾಡಿ.

Pinterest

ಪಕೋಡ ಗರಿಗರಿಯಾದಾಗ ಹೊರತೆಗೆದು ಟಿಶ್ಯೂ ಪೇಪರ್ ಹಾಕಿದ ತಟ್ಟೆಯಲ್ಲಿ ಹಾಕಿದರೆ ರುಚಿಕರ ಬ್ರೆಡ್ ಪಕೋಡ ತಿನ್ನಲು ಸಿದ್ಧ.

Pinterest

ಇದನ್ನು ಹಸಿರು ಚಟ್ನಿ ಅಥವಾ ಸಾಸ್‍ನೊಂದಿಗೆ ಬಿಸಿ ಬಿಸಿಯಾಗಿ ತಿನ್ನಿ. ಸಂಜೆ ಚಹಾ ಜೊತೆ ತಿನ್ನಲು ಮಜವಾಗಿರುತ್ತದೆ.

Pinterest

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌