ಕ್ಯಾರೆಟ್ ಕರಿ ಅನ್ನ, ರೊಟ್ಟಿ ಮತ್ತು ಚಪಾತಿಗೆ ಸೂಪರ್ ಕಾಂಬಿನೇಷನ್. ಕೇವಲ 10 ಪದಾರ್ಥಗಳನ್ನು ಬಳಸಿ ರುಚಿಕರವಾದ ಕ್ಯಾರೆಟ್ ಕರಿ ತಯಾರಿಸಬಹುದು. ಆರೋಗ್ಯಕರ ಕ್ಯಾರೆಟ್ ಕರಿ ಹೀಗೆ ತಯಾರಿಸಿ.
HT File Photo
ಬೇಕಾಗುವ ಪದಾರ್ಥಗಳು: ಆಲಿವ್ ಎಣ್ಣೆ 2 ಚಮಚ, ಇರುಳ್ಳಿ 1, ಚಿಕ್ಕದಾಗಿ ಕತ್ತರಿಸಿದ 3 ಬೆಳ್ಳುಳ್ಳಿ ಎಸಳುಗಳು, 1 ಇಂಚು ಶುಂಠಿ, 2 ಚಮಚ ಕೊತ್ತಂಬರಿ ಬೀಜ, 1 ಚಮಚ ಅರಿಶಿಣ, 3/4 ಕಪ್ ತೆಂಗಿನ ಹಾಲು, 1/2 ಕಪ್ ನೀರು, 2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹೋಳುಗಳಾಗಿ ಕತ್ತರಿಸಿದ 4 ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು.
HT File Photo
ಹಂತ1: ಮೊದಲಿಗೆ ದೊಡ್ಡ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಈರುಳ್ಳಿಯನ್ನು ಹುರಿಯಿರಿ.
HT File Photo
ಹಂತ 2: ಬೆಳ್ಳುಳ್ಳಿ, ಶುಂಠಿ ಹುರಿಯಿರಿ. ಈಗ ಕ್ಯಾರೆಟ್, ಕೊತ್ತಂಬರಿ ಬೀಜ, ಅರಿಶಿಣ ಮತ್ತು ಮೆಣಸಿನ ಪುಡಿ ಸೇರಿಸಿ 5 ನಿಮಿಷ ಹುರಿಯಿರಿ.
HT File Photo
ಹಂತ 3: ತೆಂಗಿನಕಾಯಿ ಹಾಲು ಮತ್ತು ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ.
HT File Photo
ಹಂತ 4: ಕ್ಯಾರೆಟ್ ಮೃದುವಾಗುವವರೆಗೆ ಸುಮಾರು 8 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಿಸಿ.
HT File Photo
ಹಂತ 5: ಈಗ ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಟವ್ ಆಫ್ ಮಾಡಿ ಮೇಲಿನಿಂದ ಸ್ವಲ್ಪ ಪೆಪ್ಪರ್ ಪೌಡರ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ.