ತೆಂಗಿನಕಾಯಿ ಲಾಡು ಒಂದು ಭಾರತೀಯ ಸಿಹಿತಿಂಡಿಯಾಗಿದ್ದು, ತ್ವರಿತವಾಗಿ ತಯಾರಾಗುತ್ತದೆ. ತೆಂಗಿನಕಾಯಿ, ಹಾಲು, ಸಕ್ಕರೆಯಿಂದ ತಯಾರಿಸಲಾಗುವ ಈ ಸಿಹಿತಿಂಡಿ ಬಹಳ ರುಚಿಕರವಾಗಿರುತ್ತದೆ. ಇಲ್ಲಿದೆ ಪಾಕವಿಧಾನ.
Pinterest
ಬೇಕಾಗುವ ಪದಾರ್ಥಗಳು
1 ಕಪ್ ತುರಿದ ತೆಂಗಿನಕಾಯಿ, ಅರ್ಧ ಕಪ್ ಕಂಡೆನ್ಸ್ಡ್ ಮಿಲ್ಕ್, ಕಾಲು ಕಪ್ ಪುಡಿ ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, 2 ಚಮಚದಷ್ಟು ತುಪ್ಪ.
Pinterest
ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
Pinterest
ಈಗ ತುರಿದ ತೆಂಗಿನಕಾಯಿ, ಕಂಡೆನ್ಸ್ಡ್ ಮಿಲ್ಕ್ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ.
Pinterest
ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ದಪ್ಪವಾಗುವವರೆಗೆ ಬೆರೆಸಬೇಕು.
Pinterest
ನೀವು ಬಯಸಿದ ಸ್ಥಿರತೆಯನ್ನು ಪಡೆದ ನಂತರ, ಸಣ್ಣ ಭಾಗಗಳನ್ನು ಉಂಡೆಗಳನ್ನಾಗಿ ಮಾಡಿ.
Pinterest
ಬೇಕಿದ್ದರೆ ಒಣಹಣ್ಣುಗಳನ್ನು ಬೆರೆಸಿ ಉಂಡೆ ಮಾಡಬಹುದು. ಎಲ್ಲಾ ಮಿಶ್ರಣವನ್ನು ಉಂಡೆ ಮಾಡಿದರೆ ರುಚಿಕರ ತೆಂಗಿನಕಾಯಿ ಲಾಡು ಸವಿಯಲು ಸಿದ್ಧ.
Pinterest
ಮಕ್ಕಳಿಗೆ ಈ ಸಿಹಿತಿಂಡಿ ಮಾಡಿಕೊಡಿ ಖಂಡಿತ ಇಷ್ಟಪಟ್ಟು ತಿಂತಾರೆ.