ಎಂದಾದರೂ ಕ್ಯಾರೆಟ್ ಗುಲಾಬ್ ಜಾಮೂನ್ ಪ್ರಯತ್ನಿಸಿದ್ದೀರಾ, ಇಲ್ಲಿದೆ ರೆಸಿಪಿ
freepik
By Priyanka Gowda
Dec 28, 2024
Hindustan Times
Kannada
ಗುಲಾಬ್ ಜಾಮೂನ್ ಯಾರಿಗೆ ತಾನೇ ಇಷ್ಟವಿಲ್ಲ. ಎಂದಾದರೂ ಕ್ಯಾರೆಟ್ ಜಾಮೂನ್ ಪ್ರಯತ್ನಿಸಿದ್ದೀರಾ? ಇದು ಬಹಳ ರುಚಿಕರವಾಗಿರುತ್ತದೆ.
Pixabay
ಕ್ಯಾರೆಟ್ ಗುಲಾಬ್ ಜಾಮೂನ್ ತಯಾರಿಸುವುದು ತುಂಬಾನೇ ಸುಲಭ. ಇದನ್ನು ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.
freepik
ಬೇಕಾಗುವ ಪದಾರ್ಥಗಳು: ಕ್ಯಾರೆಟ್, ತುಪ್ಪ, ಹಾಲು, ಹಾಲಿನ ಪುಡಿ, ಸಕ್ಕರೆ, ಏಲಕ್ಕಿ ಪುಡಿ.
Canva
ಮಾಡುವ ವಿಧಾನ: ಮೊದಲಿಗೆ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಅದನ್ನು ತುರಿಯಿರಿ.
Pixabay
ನಂತರ ಸ್ವಲ್ಪ ತುಪ್ಪ ಸೇರಿಸಿ, ಜತೆಗೆ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಸ್ವಲ್ಪ ಪರಿಮಳ ಬಂದಾಗ 1 ಲೋಟ ಹಾಲು ಹಾಕಿ ಬೇಯಿಸಿ.
freepik
ಕ್ಯಾರೆಟ್ ಹಾಲನ್ನು ಹೀರಿಕೊಂಡ ನಂತರ, ಅದಕ್ಕೆ ಅರ್ಧ ಕಪ್ ಹಾಲಿನ ಪುಡಿ ಸೇರಿಸಿ. ತಯಾರಿಸಿದ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
Canva
ಗುಲಾಬ್ ಜಾಮೂನ್‍ಗೆ ಸಕ್ಕರೆ ಸಿರಪ್ ತಯಾರಿಸುವಂತೆ ಇದಕ್ಕೂ ಮಾಡಬೇಕು. 2 ಲೋಟ ನೀರಿಗೆ 2 ಲೋಟ ಸಕ್ಕರೆ ಹಾಕಿ ಕುದಿಸಿ.
Canva
ನಂತರ ಮಾಡಿಟ್ಟಿರುವ ಕ್ಯಾರೆಟ್ ಮಿಶ್ರಣವನ್ನು ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ.
Canva
ಎಣ್ಣೆಯಲ್ಲಿ ಇದನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಕರಿದು, ಸಕ್ಕರೆ ಪಾಕಕ್ಕೆ ಹಾಕಿ.
Canva
ಸ್ವಲ್ಪ ಸಮಯದವರೆಗೆ ಸಕ್ಕರೆ ಪಾಕದಲ್ಲಿರಲು ಬಿಡಿ. ನಂತರ ಬಡಿಸಿದರೆ ರುಚಿಕರವಾದ ಕ್ಯಾರೆಟ್ ಜಾಮೂನು ಸವಿಯಲು ಸಿದ್ಧ.
Canva
ಸಪ್ತಮಿ ಗೌಡ ಫೋಟೋಗಳಿಗೆ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಕಾಮೆಂಟ್ ಹಾಕಿದ ಇನ್ನೋರ್ವ ನಟಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ