ಕೇರಳ ಶೈಲಿಯಲ್ಲಿ ಈ ರೀತಿ ಮೊಟ್ಟೆ ಸಾರು ಮಾಡಿ ನೋಡಿ

Pinterest

By Priyanka Gowda
Feb 07, 2025

Hindustan Times
Kannada

ಅನ್ನ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುವ ಈ ಕೇರಳ ಶೈಲಿಯ ಮೊಟ್ಟೆ ಸಾರು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

Pinterest

6 ಬೇಯಿಸಿದ ಮೊಟ್ಟೆ, 2 ಚಮಚ ಎಣ್ಣೆ, 1 ಈರುಳ್ಳಿ, 2 ಟೊಮೆಟೊ, 3 ಹಸಿಮೆಣಸಿನಕಾಯಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಚಮಚ ಸಾಸಿವೆ, 1 ಚಮಚ ಜೀರಿಗೆ.

ಬೇಕಾಗುವ ಪದಾರ್ಥಗಳು

Pinterest

1 ಚಮಚ ಕರಿಬೇವು, 1 ಚಮಚ ಅರಿಶಿನ ಪುಡಿ, 1 ಚಮಚ ಕಾಶ್ಮೀರಿ ಮೆಣಸಿನ ಪುಡಿ, 1 ಚಮಚ ಕೊತ್ತಂಬರಿ ಪುಡಿ, ಅರ್ಧ ಚಮಚ ಗರಂ ಮಸಾಲೆ ಪುಡಿ, ಅರ್ಧ ಚಮಚ ಕಾಳುಮೆಣಸಿನ ಪುಡಿ, 1 ಕಪ್ ತೆಂಗಿನ ಹಾಲು.

ಬೇಕಾಗುವ ಪದಾರ್ಥಗಳು

Pinterest

ಮಾಡುವ ವಿಧಾನ

ಮೊದಲಿಗೆ ಮೊಟ್ಟೆ ಬೇಯಿಸಿ ಸಿಪ್ಪೆ ಸುಲಿದು ಎರಡು ಭಾಗಗಳಾಗಿ ಕತ್ತರಿಸಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಹುರಿಯಿರಿ. 

Pinterest

ಹಂತ-2

ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಬೆರೆಸಿ. ಜೊತೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿದ ಟೊಮೆಟೊ ಬೆರೆಸಿ.

Pinterest

ಟೊಮೆಟೊ ಮೃದುವಾದ ನಂತರ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ.

ಹಂತ-3

Pinterest

ಇದು ಬೆಂದ ನಂತರ ತೆಂಗಿನಹಾಲು ಮತ್ತು ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕುದಿಸಿ. ನಂತರ ಬೇಯಿಸಿದ ಮೊಟ್ಟೆಯನ್ನು ಬೆರೆಸಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಕುದಿಯಲು ಬಿಡಿ.

ಹಂತ-4

Pinterest

ಹಂತ-5

ಕೊನೆಯದಾಗಿ ಗರಂ ಮಸಾಲೆ ಪುಡಿಯನ್ನು ಬೆರೆಸಿ 2-3 ನಿಮಿಷ ಬೇಯಿಸಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಕೇರಳ ಶೈಲಿಯ ಮೊಟ್ಟೆ ಸಾರು ಸಿದ್ಧ.

Pinterest

ಈ ಖಾದ್ಯವನ್ನು ಚಪಾತಿ, ಅನ್ನ, ಕೇರಳದ ಅಪ್ಪಂನೊಂದಿಗೆ ತಿನ್ನಬಹುದು. ಒಮ್ಮೆ ರೆಸಿಪಿ ಟ್ರೈ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Pinterest

ಐಪಿಎಲ್‌ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.