ರುಚಿಕರ ಸೀಗಡಿ ಪಾಕವಿಧಾನ ಇಲ್ಲಿದೆ

Canva

By Priyanka Gowda
Feb 18, 2025

Hindustan Times
Kannada

ಸಮುದ್ರಾಹಾರ ಪ್ರಿಯರಿಗೆ ಈ ರೀತಿಯ ಸೀಗಡಿ ಖಾದ್ಯ ಇಷ್ಟವಾಗಬಹುದು. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.

Canva

ಬೇಕಾಗುವ ಪದಾರ್ಥಗಳು

250 ಗ್ರಾಂ ಸೀಗಡಿ, 1 ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, 6 ಬೆಳ್ಳುಳ್ಳಿ ಎಸಳು, ಅರ್ಧ ಕಪ್ ಕತ್ತರಿಸಿದ ಈರುಳ್ಳಿ, 1 ಟೊಮೆಟೊ, 1 ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಕಪ್ ಕತ್ತರಿಸಿದ ಟೊಮೆಟೊ, ಉಪ್ಪು, ಒಣಮೆಣಸು 10, 1 ಕಪ್ ತೆಂಗಿನಹಾಲು, ಕರಿಬೇವು, 1 ಚಮಚ ಹುಣಸೆಹಣ್ಣಿನ ಪೇಸ್ಟ್, ಅರ್ಧ ಕಪ್ ತುರಿದ ತೆಂಗಿನಕಾಯಿ, 1 ಚಮಚ ಮೆಣಸಿನ ಪುಡಿ, ಅರಿಶಿನ ಪುಡಿ

Canva

ತಯಾರಿಸುವ ವಿಧಾನ

ಎಲ್ಲಾ ಮಸಾಲೆಗಳು ಹಾಗೂ ಒಣಮೆಣಸಿನಕಾಯಿಯನ್ನು ಹುರಿದು ರುಬ್ಬಿಕೊಳ್ಳಿ.

slurrp

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ.

slurrp

ನಂತರ ಟೊಮೆಟೊ, ಮೆಣಸಿನ ಪುಡಿ, ರುಬ್ಬಿರುವ ಮಸಾಲೆ ಮಿಶ್ರಣ, ಉಪ್ಪು ಬೆರೆಸಿ ಮಿಶ್ರಣ ಮಾಡಿ. 

Canva

ಮಿಶ್ರಣ ಎಣ್ಣೆ ಬಿಡಲು ಪ್ರಾರಂಭಿಸಿದಾಗ ತೆಂಗಿನಹಾಲು, ತುರಿದ ತೆಂಗಿನಕಾಯಿ, ಸೀಗಡಿ ಹಾಕಿ ಬೇಯಿಸಿ. ಈ ಮಿಶ್ರಣವನ್ನು 15 ನಿಮಿಷಗಳ ಕಾಲ ಬೇಯಿಸಿ.

Canva

ಕೊನೆಗೆ ಕರಿಬೇವು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಸೀಗಡಿ ಗ್ರೇವಿ ಸಿದ್ಧ.

Canva

Richest Celebrities: ಇವರು 2024ರ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳು

Photo Credit: Reuters