ರುಚಿಕರ ಗೋಧಿ ಲಾಡು ಪಾಕವಿಧಾನ ಇಲ್ಲಿದೆ

Pinterest

By Priyanka Gowda
Feb 02, 2025

Hindustan Times
Kannada

ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅಥವಾ ಸಿಹಿತಿಂಡಿ ತಿನ್ನುವ ಬಯಕೆ ಉಂಟಾದರೆ ಸುಲಭವಾಗಿ ತಯಾರಿಸಬಹುದು ಗೋಧಿ ಲಾಡು.

Pinterest

ಗೋಧಿ ಲಾಡನ್ನು ತಯಾರಿಸುವುದು ತುಂಬಾನೇ ಸುಲಭ. ಮೂರೇ ಮೂರು ಪದಾರ್ಥಗಳಿದ್ದರೆ ಸಾಕು ರುಚಿಕರ ಲಾಡು ತಯಾರಿಸಬಹುದು. ಇಲ್ಲಿದೆ ಪಾಕವಿಧಾನ.

Canva

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು- 2 ಕಪ್, ತುಪ್ಪ- ಅರ್ಧ ಕಪ್, ಬೆಲ್ಲ- 2 ಕಪ್.

Canva

ತಯಾರಿಸುವ ವಿಧಾನ

ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಗೋಧಿ ಹಿಟ್ಟು ಬೆರೆಸಿ.

Pinterest

ಗೋಧಿಯನ್ನು ಕೈಬಿಡದೆ ಚಮಚದಿಂದ ಕಲಸುತ್ತಿರಿ. ಸುಮಾರು 15 ನಿಮಿಷ ಕಾಲ ಕಡಿಮೆ ಉರಿಯಲ್ಲಿ ಕಲಸುತ್ತಿರಬೇಕು.

Canva

ನಂತರ ಒಲೆ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಇದಕ್ಕೆ ಬೆಲ್ಲದ ಪುಡಿ ಬೆರೆಸಿ.

Canva

ಬೆಲ್ಲದ ಪುಡಿ ಬೆರೆಸಿದ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಒಂದೊಂದಾಗಿ ಉಂಡೆ ಕಟ್ಟಿ.

Canva

ಉಂಡೆ ಕಟ್ಟಿ ತಟ್ಟೆಯಲ್ಲಿಟ್ಟು ಅಲಂಕರಿಸಿದರೆ ರುಚಿಕರವಾದ ಗೋಧಿ ಲಾಡು ತಿನ್ನಲು ಸಿದ್ಧ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟ ಆಗುತ್ತೆ.

Canva

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File