ಆರೋಗ್ಯಕರ ಕೆಂಪು ತೊಗರಿಬೇಳೆಯ ದೋಸೆ ಪಾಕವಿಧಾನ ಇಲ್ಲಿದೆ
Pinterest
By Priyanka Gowda
Feb 04, 2025
Hindustan Times
Kannada
ಆರೋಗ್ಯಕರ, ಪ್ರೋಟೀನ್ ಭರಿತ ಬೆಳಗ್ಗಿನ ಉಪಾಹಾರ ತಿನ್ನಲು ಬಯಸುವಿರಾದರೆ ಕೆಂಪು ತೊಗರಿಬೇಳೆಯ ದೋಸೆ ಪ್ರಯತ್ನಿಸಬಹುದು. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
Pinterest
ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆಯಲ್ಲಿ ಪೊಟ್ಯಾಶಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಜೀರ್ಣಕ್ರಿಯೆಗೂ ಇದು ಪ್ರಯೋಜನಕಾರಿಯಾಗಿದೆ.
Pinterest
2 ಕಪ್ ಕೆಂಪು ಬೇಳೆ, ಅರ್ಧ ಚಮಚ ಓಂಕಾಳು, ಅರ್ಧ ಈರುಳ್ಳಿ, ಅರ್ಧ ಟೊಮೆಟೊ, 1 ಹಸಿಮೆಣಸಿನಕಾಯಿ, 2 ಚಮಚ ಕೊತ್ತಂಬರಿ ಸೊಪ್ಪು, ಕಾಳುಮೆಣಸು- ಅರ್ಧ ಚಮಚ, ಉಪ್ಪು, ಎಣ್ಣೆ ಅಥವಾ ತುಪ್ಪ.
ಬೇಕಾಗುವ ಪದಾರ್ಥಗಳು
Pinterest
ಕೆಂಪು ಬೇಳೆಯನ್ನು ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಮಿಕ್ಸಿ ಜಾರ್‌ಗೆ ಹಾಕಿ, ಸ್ವಲ್ಪ ನೀರು ಬೆರೆಸಿ ಅದನ್ನು ನಯವಾಗಿ ರುಬ್ಬಿ.
ಮಾಡುವ ವಿಧಾನ
Pinterest
ಎಣ್ಣೆ ಅಥವಾ ತುಪ್ಪವನ್ನು ಹೊರತುಪಡಿಸಿ ಉಳಿದೆಲ್ಲಾ ಪದಾರ್ಥಗಳನ್ನು ದೋಸೆ ಹಿಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ.
Pinterest
ದೋಸೆಯನ್ನು ಎರಡೂ ಕಡೆ ಬಣ್ಣ ಬದಲಾಗುವವರೆಗೆ ಬೇಯಿಸಿ. ಮಧ್ಯಮ ಉರಿಯಲ್ಲಿಟ್ಟು ದೋಸೆ ಬೇಯಿಸಬೇಕು, ಇಲ್ಲದಿದ್ದರೆ ಸೀದು ಹೋಗುವ ಸಾಧ್ಯತೆಯಿರುತ್ತದೆ.
Pinterest
ಸಿದ್ಧವಾದ ದೋಸೆಯನ್ನು ಬೆಳ್ಳುಳ್ಳಿ ದಂಟಿನ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ಬಡಿಸಿ. ಇದು ತುಂಬಾ ರುಚಿಕರವಾಗಿರುತ್ತದೆ.
Pinterest
ಮಕ್ಕಳಿಗಾಗಿ ಈ ಆರೋಗ್ಯಕರ ದೋಸೆ ಮಾಡಿಕೊಡಬಹುದು. ಖಂಡಿತ ಇಷ್ಟಪಟ್ಟು ತಿಂತಾರೆ.
Pinterest
ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್
File
ಮುಂದಿನ ಸ್ಟೋರಿ ಕ್ಲಿಕ್ ಮಾಡಿ