ಬಾಯಲ್ಲಿ ನೀರೂರುವ ಚಿಕನ್ ಪೆಪ್ಪರ್ ಫ್ರೈ ರೆಸಿಪಿ ಇಲ್ಲಿದೆ

Pinterest

By Priyanka Gowda
Feb 08, 2025

Hindustan Times
Kannada

ಚಿಕನ್ ಗ್ರೇವಿ, ಸುಕ್ಕಾ, ಘೀ ರೋಸ್ಟ್ ಬದಲು ಈ ಬಾರಿ ಚಿಕನ್ ಪೆಪ್ಪರ್ ಫ್ರೈ ರೆಸಿಪಿ ಟ್ರೈ ಮಾಡಿ. ಬಹಳ ಬೇಗನೇ ತಯಾರಾಗುವ ಈ ಖಾದ್ಯವನ್ನು ತಯಾರಿಸುವುದು ತುಂಬಾ ಸುಲಭ. ಇಲ್ಲಿದೆ ರೆಸಿಪಿ.

Pinterest

ಬೇಕಾಗುವ ಸಾಮಗ್ರಿಗಳು

ಚಿಕನ್- 1 ಕೆ.ಜಿ, ಈರುಳ್ಳಿ- 1, ಹಸಿಮೆಣಸಿನಕಾಯಿ- 2, ಸೋಯಾ ಸಾಸ್- 2 ಚಮಚ, ಬೆಳ್ಳುಳ್ಳಿ ಎಸಳು- 8, ಶುಂಠಿ- 1 ಸಣ್ಣ ತುಂಡು, ಕಾಳುಮೆಣಸು- 3 ಚಮಚ, ಧನಿಯಾ ಬೀಜ- 2 ಚಮಚ.

Pinterest

ಬೇಕಾಗುವ ಸಾಮಗ್ರಿಗಳು

ಸೋಂಪು- 1 ಚಮಚ, ಜೀರಿಗೆ- 2 ಚಮಚ, ಗೋಡಂಬಿ-4, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನ ಎಲೆ- ಸ್ವಲ್ಪ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಅರಿಶಿನ- 1 ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.

Pinterest

ಮಾಡುವ ವಿಧಾನ

ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಉಪ್ಪು ಹಾಗೂ ಅರಿಶಿನ ಹಾಕಿ 15 ನಿಮಿಷ ಮ್ಯಾರಿನೇಟ್ ಮಾಡಿ. 

Pinterest

ಈರುಳ್ಳಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ. ಈಗ ಒಂದು ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಕಾಳುಮೆಣಸು, ಜೀರಿಗೆ, ಧನಿಯಾ ಬೀಜ, ಸೋಂಪು, ಗೋಡಂಬಿ ಹಾಕಿ ಹುರಿದು, ಒಂದು ತಟ್ಟೆಯಲ್ಲಿ ಎತ್ತಿಟ್ಟುಕೊಳ್ಳಿ.

Pinterest

ನಂತರ ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. 

Pinterest

ನಂತರ, ಮ್ಯಾರಿನೇಟ್ ಮಾಡಿರುವ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಚಿಕನ್ ಬೆಂದನ ನಂತರ ಸ್ವಲ್ಪ ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ.

Pinterest

ಈ ವೇಳೆ ಹುರಿದಿಟ್ಟಿರುವ ಕಾಳುಮೆಣಸು, ಜೀರಿಗೆ, ಧನಿಯಾ ಬೀಜ, ಸೋಂಪು, ಗೋಡಂಬಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ಇದನ್ನು ಬೆಂದಿರುವ ಚಿಕನ್‌ಗೆ ಹಾಕಿ ಮಿಶ್ರಣ ಮಾಡಿ.

Pinterest

ಕಾಳುಮೆಣಸಿನ ಪುಡಿಯನ್ನು ಹಾಕಿದ ನಂತರ ಚೆನ್ನಾಗಿ ಮಿಶ್ರಣ ಮಾಡಿ, ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಚಿಕನ್ ಪೆಪ್ಪರ್ ಫ್ರೈ ಸಿದ್ಧ.

Pinterest

Richest Celebrities: ಇವರು 2024ರ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳು

Photo Credit: Reuters