ಬಾಳೆಕಾಯಿ ಚಿಪ್ಸ್ ತಯಾರಿಸುವ ಸರಳ ವಿಧಾನವಿದು

Pinterest

By Priyanka Gowda
Feb 01, 2025

Hindustan Times
Kannada

ಕರ್ನಾಟಕದ ಕರಾವಳಿ ಭಾಗದಲ್ಲಿ ಬಾಳೆಕಾಯಿ ಚಿಪ್ಸ್ ಬಹಳ ಪ್ರಸಿದ್ಧಿ ಪಡೆದಿದೆ. ಕರಾವಳಿ ಹೊರತುಪಡಿಸಿ ಇನ್ನಿತರೆ ಪ್ರದೇಶಗಳಲ್ಲೂ ಇದನ್ನು ತಯಾರಿಸಲಾಗುತ್ತದೆ.

Pinterest

ಬಾಳೆಕಾಯಿ ಚಿಪ್ಸ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನು ಮನೆಯಲ್ಲೇ ಬಹಳ ಸುಲಭವಾಗಿ ತಯಾರಿಸಬಹುದು. ಇಲ್ಲಿದೆ ಪಾಕವಿಧಾನ.

Pinterest

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ, ತೆಂಗಿನೆಣ್ಣೆ (ಇತರೆ ಅಡುಗೆ ಎಣ್ಣೆಯನ್ನೂ ಬಳಸಬಹುದು), ಉಪ್ಪು, ಅರಶಿನ, ನೀರು.

freepik

ತಯಾರಿಸುವ ವಿಧಾನ

ಬಾಳೆಕಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸಣ್ಣದಾಗಿ ಕತ್ತರಿಸಿ.

Pexel

ನೀರಿಗೆ ಅರಶಿನ ಹಾಗೂ ಉಪ್ಪು ಬೆರೆಸಿ ಅದರಲ್ಲಿ ಕತ್ತರಿಸಿಟ್ಟ ಬಾಳೆಕಾಯಿಯನ್ನು ಹಾಕಿ 5 ನಿಮಿಷಗಳ ಕಾಲ ನೆನೆಸಿಡಿ.

freepik

ನೀರಿನಲ್ಲಿ ನೆನೆಸಿಟ್ಟ ಬಾಳೆಕಾಯಿಯನ್ನು 5 ನಿಮಿಷದ ನಂತರ ಹೊರತೆಗೆದು ಅದನ್ನು ಚೆನ್ನಾಗಿ ಒಣಗಿಸಿ. 

Pinterest

ಬಾಳೆಕಾಯಿ ಒಣಗಿದ ನಂತರ ಒಲೆ ಮೇಲೆ ಬಾಣಲೆಯಿಟ್ಟು ಕರಿಯಲು ಬೇಕಾದಷ್ಟು ಎಣ್ಣೆ ಬಿಸಿ ಮಾಡಿ.

Pinterest

ಎಣ್ಣೆ ಕಾದ ನಂತರ ಕತ್ತರಿಸಿರುವ ಬಾಳೆಕಾಯಿಯನ್ನು ಹಾಕಿ ಕರಿಯಿರಿ. ಇದನ್ನು ಬಣ್ಣ ಬದಲಾಗುವವರೆಗೆ ಚೆನ್ನಾಗಿ ಕರಿಯಬೇಕು. 

Pinterest

ಕರಿದ ಬಾಳೆಕಾಯಿಯನ್ನು ಒಂದು ತಟ್ಟೆಗೆ ಹಾಕಿ ಉಪ್ಪು ಹಾಗೂ ಮೆಣಸಿನ ಪುಡಿ ಚಿಮುಕಿಸಿದರೆ ಗರಿಗರಿ ಚಿಪ್ಸ್ ತಿನ್ನಲು ಸಿದ್ಧ.

Pinterest

ಇದನ್ನು ಸಂಜೆ ಚಹಾ ಜೊತೆ ತಿನ್ನಲು ರುಚಿಕರವಾಗಿರುತ್ತದೆ. ಬೇಕರಿಯಿಂದ ಖರೀದಿಸುವ ಬದಲು ಮನೆಯಲ್ಲೇ ಈ ರೀತಿ ಮಾಡಿ ನೋಡಿ.

Pinterest

ಸೀರೆಯುಟ್ಟು ಸಿಂಪಲ್ ಪೋಸ್‌ ನೀಡಿದ ಅನುಪಮಾ ಗೌಡ; ಸೋ ಬ್ಯೂಟಿಫುಲ್ ಎಂದ ಅಭಿಮಾನಿಗಳು