ಆರೋಗ್ಯಕರ, ರುಚಿಕರ ಸಾಂಪ್ರದಾಯಿಕ 8 ಬಗೆಯ ದಕ್ಷಿಣ ಭಾರತೀಯ ಚಟ್ನಿಗಳಿವು

Pinterest

By Priyanka Gowda
Jan 08, 2025

Hindustan Times
Kannada

ದಕ್ಷಿಣ ಭಾರತೀಯ ಪಾಕಪದ್ಧತಿಯು ರುಚಿ ಹಾಗೂ ಪರಿಮಳಕ್ಕೆ ಬಹಳ ಹೆಸರುವಾಸಿಯಾಗಿದೆ. ಇಲ್ಲಿ ತಯಾರಿಸಲಾಗುವ ಚಟ್ನಿಯು ದೋಸೆ, ಇಡ್ಲಿ ಮಾತ್ರವಲ್ಲದೆ ಅನ್ನ, ಚಿತ್ರಾನ್ನದ ಜತೆಗೆ ತಿನ್ನಲೂ ರುಚಿಕರವಾಗಿರುತ್ತದೆ.

Pinterest

ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ಪ್ರಸಿದ್ಧ 8 ಬಗೆಯ ಚಟ್ನಿಗಳ ಬಗ್ಗೆ ಇಲ್ಲಿದೆ ಮಾಹಿತಿ.

Pinterest

ಕಡಲೆಕಾಯಿ ಚಟ್ನಿ: ಹುರಿದ ಕಡಲೆಕಾಯಿಯನ್ನು ಒಣಮೆಣಸು, ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಒಗ್ಗರಣೆ ಕೊಡಿ.

Pinterest

ತೆಂಗಿನಕಾಯಿ ಚಟ್ನಿ: ತೆಂಗಿನತುರಿ, ಹುರಿದ ಕಡಲೆಬೇಳೆ, ಹಸಿ ಮೆಣಸಿನಕಾಯಿ, ಶುಂಠಿ, ಉಪ್ಪು, ಕರಿಬೇವಿನ ಎಲೆ, ನೀರು ಹಾಕಿ ರುಬ್ಬಲಾಗುತ್ತದೆ. ಇದಕ್ಕೆ ಒಗ್ಗರಣೆ ಸೇರಿಸಿದರೆ ಬಹಳ ರುಚಿಕರವಾಗಿರುತ್ತದೆ.

Pinterest

ಟೊಮೆಟೊ ಚಟ್ನಿ: ಈರುಳ್ಳಿ, ಬೆಳ್ಳುಳ್ಳಿ, ಒಣಮೆಣಸು ಹುರಿದುಕೊಂಡು ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಹುಣಸೆಹಣ್ಣು, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಒಗ್ಗರಣೆ ಕೊಟ್ಟರೆ ಚಟ್ನಿ ಸಿದ್ಧ.

Pinterest

ಕ್ಯಾರೆಟ್ ಚಟ್ನಿ: ಈ ಚಟ್ನಿ ಮಾಡಲು ತುರಿದ ಕ್ಯಾರೆಟ್, ತೆಂಗಿನತುರಿ, ಒಣಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣನ್ನು ರುಬ್ಬಿಕೊಳ್ಳಿ. ನಂತರ ಎಣ್ಣೆಗೆ ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಕರಿಬೇವಿನ ಎಲೆಯ ಒಗ್ಗರಣೆ ಹಾಕಿದರೆ ರುಚಿಕರವಾಗಿರುತ್ತದೆ. 

Pinterest

ಬೀಟ್ರೂಟ್ ಚಟ್ನಿ: ಬೆಳ್ಳುಳ್ಳಿ , ಒಣಮೆಣಸು, ಬೀಟ್ರೂಟ್ ಹುರಿದು ತೆಂಗಿನತುರಿ ಮತ್ತು ಹುಣಸೆಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ, ಒಣಮೆಣಸು, ಕರಿಬೇವಿನ ಎಲೆಯ ಒಗ್ಗರಣೆ ಕೊಡಿ.

Pinterest

ಕೊತ್ತಂಬರಿ ಚಟ್ನಿ: ಕೊತ್ತಂಬರಿ ಸೊಪ್ಪು, ತೆಂಗಿನತುರಿ, ಹಸಿಮೆಣಸಿನಕಾಯಿ, ಶುಂಠಿ, ಹುರಿದ ಕಡಲೆಬೇಳೆ, ಉಪ್ಪು, ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿ, ನಿಂಬೆ ರಸ ಹಿಂಡಿ.

Pinterest

ಈರುಳ್ಳಿ-ಟೊಮೆಟೊ ಚಟ್ನಿ: ಟೊಮೆಟೊ, ಬೆಳ್ಳುಳ್ಳಿ, ಈರುಳ್ಳಿಯನ್ನು ಹುರಿದು ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆಗೆ ಹುರಿದ ಒಣಮೆಣಸು, ಹುಣಸೆಹಣ್ಣು, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಒಗ್ಗರಣೆ ಕೊಟ್ಟರೆ ಚಟ್ನಿ ಸಿದ್ಧ.

Pinterest

ಕರಿಬೇವಿನ ಚಟ್ನಿ: ಕರಿಬೇವಿನ ಎಲೆ, ಹುಣಸೆಹಣ್ಣು, ಒಣಮೆಣಸು, ಹುರಿದ ಕೊತ್ತಂಬರಿ ಬೀಜ, ಕಾಳುಮೆಣಸು, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಒಗ್ಗರಣೆ ಹಾಕಿ ರುಬ್ಬಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿದರೆ ಸಾಕು ಚಟ್ನಿ ಸಿದ್ಧ.

Pinterest

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?