ದಿಢೀರ್ ಆಗಿ ಮಾಡಿ ಬಾಯಲ್ಲಿ ನೀರೂರುವ ಹೆಸರು ಬೇಳೆ ಹಲ್ವಾ

Pinterest

By Priyanka Gowda
Jan 29, 2025

Hindustan Times
Kannada

ಸಿಹಿತಿಂಡಿ ತಿನ್ನುವ ಕಡುಬಯಕೆ ಉಂಟಾದರೆ ರುಚಿಕರವಾದ ಹೆಸರುಬೇಳೆ ಹಲ್ವಾ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ.

Pinterest

ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್ ಹೆಸರುಬೇಳೆ, 2 ಕಪ್ ಕುದಿಸಿದ ಹಾಲು, ಅರ್ಧ ಕಪ್ ತುಪ್ಪ, ¼ ಕಪ್ ಸಕ್ಕರೆ, ¼ ಚಮಚ ಏಲಕ್ಕಿ ಪುಡಿ, 2 ಚಮಚ ಸಣ್ಣಗೆ ಕತ್ತರಿಸಿದ ಪಿಸ್ತಾ ಮತ್ತು ಬಾದಾಮಿ.

Pinterest

ತಯಾರಿಸುವ ವಿಧಾನ

ಬಾಣಲೆಯನ್ನು ಒಲೆ ಮೇಲಿಟ್ಟು ಸ್ವಲ್ಪ ತುಪ್ಪ ಬಿಸಿ ಮಾಡಿ. ಇದಕ್ಕೆ ಹೆಸರುಬೇಳೆಯನ್ನು ಹಾಕಿ ಪರಿಮಳ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಿರಂತರವಾಗಿ ಮಿಶ್ರಣ ಮಾಡುತ್ತಿರಬೇಕು,

Pinterest

ನಂತರ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ, ಇದಕ್ಕೆ ಸ್ವಲ್ಪ ಸ್ವಲ್ಪವೇ ಹಾಲು ಬೆರೆಸಿ. ಮಿಶ್ರಣ ಉಂಡೆ ಕಟ್ಟದಂತೆ ಎಚ್ಚರವಹಿಸಿ, ನಿರಂತರವಾಗಿ ಮಿಶ್ರಣ ಮಾಡುತ್ತಿರಿ.

Pinterest

ನಂತರ ಈ ಮಿಶ್ರಣಕ್ಕೆ ಸಕ್ಕರೆ ಬೆರೆಸಿ ಚಮಚದಿಂದ ಕೈಬಿಡದೆ ಕಲಸಿ. ಸಕ್ಕರೆ ಕರಗುತ್ತಿದ್ದಂತೆ ಹಲ್ವಾ ದಪ್ಪವಾಗುತ್ತದೆ. ಸಕ್ಕರೆ ಬದಲು ಬೆಲ್ಲವನ್ನು ಕೂಡ ಬೆರೆಸಬಹುದು.

Pinterest

ಹಲ್ವಾ ದಪ್ಪವಾಗಲು ಪ್ರಾರಂಭಿಸಿದಾಗ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದರಿಂದ ಇನ್ನಷ್ಟು ರುಚಿಕರವಾಗುತ್ತದೆ.

Pinterest

ತುಪ್ಪವು ಮಿಶ್ರಣದಿಂದ ಬೇರ್ಪಟ್ಟಾಗ ಹಲ್ವಾ ಸಿದ್ಧವಾಗಿದೆ ಎಂದರ್ಥ. ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಪಿಸ್ತಾ, ಬಾದಾಮಿಯನ್ನು ಬೆರೆಸಿ ಮಿಶ್ರಣ ಮಾಡಿದರೆ ರುಚಿಕರವಾದ ಹೆಸರುಬೇಳೆ ಹಲ್ವಾ ತಿನ್ನಲು ಸಿದ್ಧ.

Pinterest

ಮನೆಗೆ ದಿಢೀರನೆ ಅತಿಥಿಗಳು ಬಂದಾಗ ಈ ಸಿಹಿತಿಂಡಿಯನ್ನು ಮಾಡಿಕೊಡಬಹುದು. ಖಂಡಿತ ಇಷ್ಟಪಡುತ್ತಾರೆ.

Pinterest

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು