ರುಚಿಕರ ರಾಗಿ ಇಡ್ಲಿ ಪಾಕವಿಧಾನ ಇಲ್ಲಿದೆ

Slurrp

By Priyanka Gowda
Feb 12, 2025

Hindustan Times
Kannada

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ಇಡ್ಲಿಯನ್ನು ಉಪಾಹಾರವನ್ನಾಗಿ ತಯಾರಿಸಲಾಗುತ್ತದೆ. ಇಲ್ಲಿ ರಾಗಿ ಇಡ್ಲಿ ಪಾಕವಿಧಾನವನ್ನು ತಿಳಿಸಲಾಗಿದೆ.

Slurrp

ಬೇಕಾಗುವ ಪದಾರ್ಥಗಳು

ಅರ್ಧ ಕಪ್ ಉದ್ದಿನ ಬೇಳೆ, ಕಾಲು ಚಮಚ ಮೆಂತ್ಯ, 1 ಕಪ್ ರಾಗಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು.

slurrp

ತಯಾರಿಸುವ ವಿಧಾನ

ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ತೊಳೆದು 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.

slurrp

ಈಗ ರಾಗಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಮಿಶ್ರಣ ಮಾಡಿ. ಹಿಟ್ಟು ಸ್ವಲ್ಪ ದಪ್ಪವಾಗಿರಲಿ. ಗಂಟಾಗದಂತೆ ನೋಡಿಕೊಳ್ಳಿ.

ಈಗ ರುಬ್ಬಿರುವ ಉದ್ದಿನ ಬೇಳೆ ಹಾಗೂ ರಾಗಿ ಮಿಶ್ರಣವನ್ನು ಒಂದೇ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ರಾತ್ರಿಯಿಡೀ ಹುದುಗಲು ಬಿಡಿ.

Adobe Stock

ಬೆಳಗ್ಗೆ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ನಂತರ ಇದನ್ನು ಸುಮಾರು 15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. (ಸಾಂಕೇತಿಕ ಚಿತ್ರ)

slurrp

15 ನಿಮಿಷದ ನಂತರ ರಾಗಿ ಇಡ್ಲಿಯನ್ನು ತೆಗೆದು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಿಸಿ ಬಿಸಿಯಾಗಿ ಬಡಿಸಿ.

slurrp

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ