ಈ ರೀತಿ ಸಿಂಪಲ್ಲಾಗಿ ಮಾಡಿ ರುಚಿಕರ ಬೀಟ್ರೂಟ್ ಹಲ್ವಾ

Pinterest

By Priyanka Gowda
Jan 04, 2025

Hindustan Times
Kannada

ಹಲ್ವಾ ಸಿಹಿಭಕ್ಷ್ಯವನ್ನು ವಿವಿಧ ಪದಾರ್ಥಗಳಿಂದ ತಯಾರಿಸಬಹುದು. ಬೀಟ್ರೂಟ್ ಹಲ್ವಾ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

Pinterest

ಬೀಟ್ರೂಟ್‍ನಿಂದ ಪಲ್ಯ, ಚಪಾತಿ ಮಾತ್ರವಲ್ಲ ಈ ರೀತಿ ರುಚಿಕರವಾದ, ಬಾಯಲ್ಲಿ ನೀರೂರುವ ಹಲ್ವಾ ತಯಾರಿಸಬಹುದು.

freepik

ಬೇಕಾಗುವ ಪದಾರ್ಥಗಳು: ಬೀಟ್ರೂಟ್- 300 ಗ್ರಾಂ, ತುಪ್ಪ- 2 ಟೀ ಚಮಚ, ಹಾಲು- 1.5 ಕಪ್, ಸಕ್ಕರೆ- ½ ಕಪ್, ದ್ರಾಕ್ಷಿ-ಗೋಡಂಬಿ – ಸ್ವಲ್ಪ, ಏಲಕ್ಕಿ ಪುಡಿ- ¼ ಟೀ ಚಮಚ.

Pinterest

ಮಾಡುವ ವಿಧಾನ: ಮೊದಲಿಗೆ ಬೀಟ್ರೂಟ್ ತೊಳೆದು ಅದರ ಸಿಪ್ಪೆ ತೆಗೆಯಿರಿ. ಅದನ್ನು ಸಣ್ಣಗೆ ತುರಿಯಿರಿ.

Pinterest

ಸ್ವಲ್ಪ ತುಪ್ಪ ಬಿಸಿ ಮಾಡಿ ಗೋಡಂಬಿ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ ಅವುಗಳನ್ನು ಪಕ್ಕಕ್ಕೆ ಇರಿಸಿ.

Pinterest

ತುರಿದ ಬೀಟ್ರೂಟ್ ಅನ್ನು ತುಪ್ಪ ಸೇರಿಸಿ 5 ನಿಮಿಷ ಬೇಯಿಸಿ. ನಂತರ ಹಾಲು ಹಾಕಿ ಕುದಿಯಲು ಬಿಡಿ.

Pinterest

ಮಿಶ್ರಣವು ಗಟ್ಟಿಯಾದ ನಂತರ, ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ. ಸಕ್ಕರೆ ಕರಗುವವರೆಗೆ ಬೇಯಿಸಿ.

Pinterest

ಮಿಶ್ರಣವು ಗಟ್ಟಿಯಾದಾಗ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಸೇರಿಸಿದರೆ ರುಚಿಕರವಾದ ಬೀಟ್ರೂಟ್ ಹಲ್ವಾ ಸವಿಯಲು ಸಿದ್ಧ.

Pinterest

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ