ಮನೆಯಲ್ಲಿ ಮಾಡುವ ಪಕೋಡ ಗರಿಗರಿಯಾಗಿ ಬರಲು ಇಲ್ಲಿದೆ ಟಿಪ್ಸ್
freepik
By Priyanka Gowda Jan 02, 2025
Hindustan Times Kannada
ಪಕೋಡ ಗರಿಗರಿಯಾಗಿ ಬರಲು ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ಎಣ್ಣೆಯಲ್ಲಿ ಹುರಿಯುವಾಗ ಎಣ್ಣೆ ಕಾದಿರಬೇಕು. ಹಾಗಿದ್ದರೆ ಮಾತ್ರ ಗರಿಗರಿಯಾಗಿ ಬರುತ್ತದೆ.
freepik
ಹಿಟ್ಟನ್ನು ತಯಾರಿಸುವಾಗ ತಣ್ಣೀರನ್ನೇ ಹೆಚ್ಚು ಬಳಸಿ. ಕಾದ ಎಣ್ಣೆಯಲ್ಲಿ ಫ್ರೈ ಮಾಡುವಾಗ ಗರಿಗರಿಯಾಗಿ ಬರಲು ಸಹಾಯ ಮಾಡುತ್ತದೆ.
freepik
ಹಿಟ್ಟಿಗೆ 1 ಚಮಚದಷ್ಟು ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ (ಜೋಳ ಹಿಟ್ಟು) ಸೇರಿಸುವುದರಿಂದ ಪಕೋಡ ಗರಿಗರಿಯಾಗಿ ಬರುತ್ತದೆ.
freepik
ಹಿಟ್ಟನ್ನು ತುಂಬಾ ನಯವಾಗಿ ಮಾಡಬೇಡಿ, ಹಾಕಿರುವ ಪದಾರ್ಥಗಳನ್ನು ನಿಧಾನವಾಗಿ ಮಿಶ್ರಣ ಮಾಡಿ.
freepik
ಹುರಿಯುವ ಮೊದಲು ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಮಾಡಿ. ಎಣ್ಣೆ ತುಂಬಾ ಬಿಸಿಯಾಗಿದ್ದರೆ ಪಕೋಡಗಳು ಸುಟ್ಟು ಹೋಗುವಂತಾಗುತ್ತದೆ. ಎಣ್ಣೆ ಬಿಸಿಯಿಲ್ಲದಿದ್ದರೆ ಪಕೋಡ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
Canva
ಒಂದೇ ಸಮನೆ ತುಂಬಾ ಹಿಟ್ಟುಗಳ ಉಂಡೆಯನ್ನು ಹಾಕುತ್ತಾ ಪಕೋಡಗಳನ್ನು ಫ್ರೈ ಮಾಡಬೇಡಿ. ಸ್ವಲ್ಪ ಸ್ವಲ್ಪವೇ ಮಾಡುವುದು ಉತ್ತಮ.
freepik
ಹುರಿದ ನಂತರ ಪಕೋಡಗಳನ್ನು ನೇರವಾಗಿ ತಟ್ಟೆಗೆ ಹಾಕುವ ಬದಲು ಟಿಶ್ಯೂ ಪೇಪರ್‌ಗೆ ಹಾಕಿ. ಇದು ಎಣ್ಣೆಯನ್ನು ಹೀರಿಕೊಳ್ಳುತ್ತದೆ.