ಮಾಂಸಾಹಾರ ಪ್ರಿಯರಿಗೆ ಚಿಕನ್ ಭಕ್ಷ್ಯವೆಂದರೆ ಬಹಳ ಇಷ್ಟ. ಇದರಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ.
ಚಿಕನ್ ಸಾರು ಅಥವಾ ಗ್ರೇವಿ ತೆಳುವಾಗಿದ್ದರೆ ಬಹುತೇಕರು ಇಷ್ಟಪಡುವುದಿಲ್ಲ. ದಪ್ಪ ಗ್ರೇವಿಯನ್ನು ಇಷ್ಟಪಡುತ್ತಾರೆ.
ಚಿಕನ್ ಗ್ರೇವಿ ತೆಳುವಾಗಿದ್ದರೆ, ಅದು ದಪ್ಪವಾಗಿ ಬರಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಿ.
ಟೊಮೆಟೊ ಮತ್ತು ಈರುಳ್ಳಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇವೆರಡನ್ನೂ ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಿರಿ.
Canva
ಟೊಮೆಟೊ-ಈರುಳ್ಳಿಯ ಹಸಿವಾಸನೆ ಹೋದ ನಂತರ ಈ ಮಿಶ್ರಣವನ್ನು ಚಿಕನ್ ಗ್ರೇವಿಗೆ ಬೆರೆಸಿ. ಇದರಿಂದ ತೆಳುವಾಗಿರುವ ಗ್ರೇವಿ ದಪ್ಪವಾಗುತ್ತದೆ.
ಅಕ್ಕಿಯನ್ನು ಕೂಡ ಬಳಸಬಹುದು. ಇದನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿ ನಂತರ ರುಬ್ಬಿಕೊಳ್ಳಿ.
ನಂತರ ರುಬ್ಬಿದ ಅಕ್ಕಿಯನ್ನು ಚಿಕನ್ ಗ್ರೇವಿಗೆ ಮಿಶ್ರಣ ಮಾಡುವುದರಿಂದ ಖಾದ್ಯ ದಪ್ಪವಾಗುತ್ತದೆ. ಹಾಗೆಯೇ ರುಚಿಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ.
ಚಿಕನ್ ಗ್ರೇವಿ ದಪ್ಪವಾಗಿಸಲು ಮೊಸರು ಅಥವಾ ಕೆನೆ (ಕ್ರೀಮ್) ಅನ್ನು ಸಹ ಬಳಸಬಹುದು.
ಚಿಕನ್ ಗ್ರೇವಿ ದಪ್ಪವಾಗಿ ಬರಲು ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ ಇತ್ಯಾದಿ ಮಸಾಲೆಗಳನ್ನು ಬಾಣಲೆಯಲ್ಲಿ ಎಣ್ಣೆ ಹಾಕಿ ಹುರಿಯಿರಿ.
ಈರುಳ್ಳಿ-ಬೆಳ್ಳುಳ್ಳಿಯನ್ನು ಸಹ ಹುರಿಯಿರಿ. ಇದನ್ನು ಹಾಗೂ ಹುರಿದ ಮಸಾಲೆಗಳನ್ನು ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಗ್ರೇವಿಗೆ ಬೆರೆಸಿದರೆ ಖಾದ್ಯ ದಪ್ಪವಾಗುತ್ತದೆ.