ಸಖತ್ ಟೇಸ್ಟಿ ಆಗಿರೋ ವಿವಿಧ ಹಣ್ಣುಗಳ ಚಟ್ನಿ ರೆಸಿಪಿ ಇಲ್ಲಿದೆ

Pinterest

By Priyanka Gowda
Feb 05, 2025

Hindustan Times
Kannada

ಹಣ್ಣುಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವ ಹಣ್ಣುಗಳಿಂದ ಚಟ್ನಿಗಳನ್ನು ಸಹ ತಯಾರಿಸಬಹುದು.

Pinterest

ತೆಂಗಿನಕಾಯಿ, ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಚಟ್ನಿ ಮಾತ್ರವಲ್ಲ ಈ ಏಳು ಬಗೆಯ ಹಣ್ಣುಗಳಿಂದಲೂ ಚಟ್ನಿ ತಯಾರಿಸಬಹುದು. 

Pinterest

ಕಿತ್ತಳೆ ಸಿಪ್ಪೆಯನ್ನು ಬೇಯಿಸಿ ಅದಕ್ಕೆ ಬೆಲ್ಲ, ಹುಣಸೆಹಣ್ಣು, ಮೆಣಸಿನಕಾಯಿ, ಸಾಸಿವೆ ಬೀಜಗಳನ್ನು ಹಾಕಿ ಮಿಕ್ಸಿ ಜಾರ್‌ನಲ್ಲಿ ರುಬ್ಬಿ ಇದನ್ನು ತಯಾರಿಸಲಾಗುತ್ತದೆ. ಅನ್ನ, ದೋಸೆ, ಚಪಾತಿಗೆ ರುಚಿಕರವಾಗಿರುತ್ತದೆ ಈ ಚಟ್ನಿ.

ಕಿತ್ತಳೆ ಚಟ್ನಿ

Pinterest

ಪ್ಲಮ್ ಹಣ್ಣನ್ನು ಸಕ್ಕರೆ ಮತ್ತು ವಿವಿಧ ಮಸಾಲೆಗಳನ್ನು ಹಾಕಿ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಬೇಕು. ಈ ಚಟ್ನಿಯು ಬ್ರೆಡ್ ಟೋಸ್ಟ್‌ನೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ಪ್ಲಮ್ ಚಟ್ನಿ

Pinterest

ಸಣ್ಣಗೆ ಕತ್ತರಿಸಿ ಸೇಬು (ಆಪಲ್) ಹಣ್ಣಿಗೆ ಸಕ್ಕರೆ, ವಿವಿಧ ಮಸಾಲೆಗಳನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಇದಕ್ಕೆ ವಿನೆಗರ್ ಬೆರೆಸಿ ಮಿಶ್ರಣವನ್ನು ರುಬ್ಬಿದರೆ ಆಪಲ್ ಚಟ್ನಿ ಸಿದ್ಧ. ಇದು ಕೂಡ ಟೋಸ್ಟ್ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

ಆಪಲ್ ಚಟ್ನಿ

Pinterest

ತುಸು ಹಣ್ಣಾಗಿರುವ ಪಪ್ಪಾಯಿಯನ್ನು ತುರಿದು ಇದಕ್ಕೆ ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ, ಅರಿಶಿನ ಹಾಕಿ ಬೇಯಿಸಿ. ಕೆಂಪು ಮೆಣಸಿನ ಪುಡಿಯನ್ನೂ ಬೆರೆಸುಬಹುದು. ಇದನ್ನು ಪರೋಟದೊಂದಿಗೆ ತಿನ್ನಬಹುದು.

ಪಪ್ಪಾಯಿ ಚಟ್ನಿ

Pinterest

ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆ ಇಡಲು ಪ್ರಾರಂಭಿಸಿದೆ. ಮಾವಿನಹಣ್ಣಿನ ತಿರುಳನ್ನು ತೆಗೆದು ಅದಕ್ಕೆ ಹಸಿಮೆಣಸಿನಕಾಯಿ ಅಥವಾ ಖಾರದ ಮೆಣಸಿನಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿದರೆ ಸಾಕು, ರುಚಿಕರವಾದ ಚಟ್ನಿ ಸಿದ್ಧ.

ಮಾವಿನಹಣ್ಣಿನ ಚಟ್ನಿ

Pinterest

ಕತ್ತರಿಸಿದ ಪೇರಳೆಗೆ ನಿಂಬೆರಸ, ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ರುಬ್ಬಿಕೊಳ್ಳಿ. ಕುರುಕಲು ತಿಂಡಿಯೊಂದಿಗೆ ಬೆರಿಸಿ ತಿನ್ನಲು ರುಚಿಯಾಗಿರುತ್ತದೆ.

ಪೇರಳೆ ಚಟ್ನಿ

Pinterest

ಚೆನ್ನಾಗಿ ತೊಳೆದ ಕ್ರ್ಯಾನ್‌ಬೆರಿ ಹಣ್ಣಿಗೆ  ಸಕ್ಕರೆ, ಕಿತ್ತಳೆ ರಸ, ದಾಲ್ಚಿನ್ನಿ ಮತ್ತು ಶುಂಠಿ ಹಾಕಿ ಕುದಿಸಿ. ನಂತರ ಈ ಪದಾರ್ಥಗಳನ್ನು ನಯವಾಗಿ ರುಬ್ಬಿಕೊಳ್ಳಿ. ಟೋಸ್ಟ್‌ನೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.

ಕ್ರ್ಯಾನ್‌ಬೆರಿ ಚಟ್ನಿ

Pinterest

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು