ಸಂಜೆ ಮಳೆಯ ಖುಷಿ ಹೆಚ್ಚಿಸುವ ಗರಿಗರಿ ಪಕೋಡ ಹೀಗೆ ಮನೆಯಲ್ಲೇ ತಯಾರಿಸಿ ಸವಿಯಿರಿ

By Raghavendra M Y
Jun 12, 2024

Hindustan Times
Kannada

ಹೊರಗೆ ಮಳೆ ಇದ್ದು, ಪ್ಲೇಟ್‌ನಲ್ಲಿ ಕುರುಂಕುರುಂ ಕುರುಕಲು ಇದ್ದರೆ ಸಂಜೆಯ ಮಳೆಯ ಖುಷಿಗೆ ಪಾರವೇ ಇರುವುದಿಲ್ಲ

ಮಾನ್ಸೂನ್ ಆರಂಭವಾಗಿದೆ. ವಾತಾವರಣ ಸಖತ್ ಕೂಲ್ ಆಗಿದ್ದಾಗ ಟೀ ಜೊತೆಗೆ ಬಿಸಿಯಾದ ಪಕೋಡ ಒಳ್ಳೆ ಕಾಂಬಿನೇಷನ್ ಆಗಿರುತ್ತೆ

ಅಂಗಡಿಯಿಂದ ತರುವ ಬದಲು ಗರಿಗರಿಯಾದ ಪಕೋಡವನ್ನು ಮನೆಯಲ್ಲೇ ಹೇಗೆ ತಯಾರಿಸೋದು ಅನ್ನೋದನ್ನ ತಿಳಿಯೋಣ

ಪಕೋಡಗೆ ಬೇಕಿರುವ ಪದಾರ್ಥಗಳು- 2 ದೊಡ್ಡ ಈರುಳ್ಳಿ, 1 ಕಪ್ ಕಡಲೆ ಹಿಟ್ಟು, 2-3 ಹಸಿ ಮೆಣಸಿನಕಾಯಿ, 2 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅರಿಶಿನ ಪುಡಿ,

1 ಚಮಚ ಖಾರದ ಪುಡಿ, 1 ಚಮಚ ಜೀರಿಗೆ, 1 ಚಮಚ ಕತ್ತರಿಸಿದ ಕೊತ್ತಂಬರಿ, 1 ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು, ಪಾತ್ರೆಯಲ್ಲಿ ಉರಿಯುವಷ್ಟು ಎಣ್ಣೆ

ಹಂತ 1: ಕಡಲೆ ಹಿಟ್ಟು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ, ಮಸಾಲೆ ಪುಡಿಗಳು, ಜೀರಿಗೆ, ಇಂಗು, ಉಪ್ಪು, ಕತ್ತರಿಸಿದ ಈರುಳ್ಳಿ ಮಿಶ್ರಣ ಮಾಡಿಕೊಳ್ಳಬೇಕು

ಹಂತ 2: ಸ್ವಲ್ಪ ನೀರನ್ನು ಹಾಕಿ ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು, ಮಿಶ್ರಣ ಮಾಡಿರುವ ಹಿಟ್ಟನ್ನು ನಿಧಾನವಾಗಿ ಬಿಸಿ ಎಣ್ಣೆಗೆ ಬಿಡಿ

ಹಂತ 3: 3-4 ನಿಮಿಷ ಕಾಲ ಮಧ್ಯಮ ಗಾತ್ರದಲ್ಲಿ ಎಣ್ಣೆಯಲ್ಲಿ ಉರಿದು ಕಂದು ಬಣ್ಣಕ್ಕೆ ತಿರುಗಿದಾಗ ಹೊರಗಡೆ ತೆರೆಗೆಯಿರಿ

ಹಂತ 4: ಪಕೋಡ ಮೇಲಿರುವ ಎಣ್ಣೆಯನ್ನು ತೆಗೆಯಲು ಮೊದಲು 1 ಪಾತ್ರಗೆ ಹಾಕಿಕೊಳ್ಳಿ. ನಂತರ ಮತ್ತೊಂದು ಪಾತ್ರಗೆ ಬದಲಾಯಿಸಿಕೊಳ್ಲ್ಳಿ. ಚೆಟ್ನಿಯೊಂದಿಗೆ ಪಕೋಡ ಸವಿಯಿರಿ

ಅಖಾಡಗಳು ಮಹಾಕುಂಭದ ಪ್ರಮುಖ ಆಕರ್ಷಣೆಯ ಕೇಂದ್ರ

Pic Credit: Shutterstock